Wednesday, June 24, 2026
Homeತಾಜಾ ಸುದ್ದಿಇರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳ ಮೇಲೆ 25% ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಇರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳ ಮೇಲೆ 25% ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

- Advertisement -
- Advertisement -

ವಾಷಿಂಗ್ಟನ್: ಇರಾನ್ ನಲ್ಲಿ ಹೆಚ್ಚುತ್ತಿರುವ ಅಶಾಂತಿಯ ನಡುವೆಯೇ ಇರಾನ್ ಜತೆ ವ್ಯವಹಾರ ಮುಂದುವರೆಸುವ ಯಾವುದೇ ದೇಶದ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಘೋಷಣೆ ಮಾಡಿದ್ದಾರೆ.

ಇರಾನ್ ವಿರುದ್ಧದ ಒತ್ತಡ ತಂತ್ರವಾಗಿ 25% ರಷ್ಟು ಸುಂಕವನ್ನು ಘೋಷಣೆ ಮಾಡಿರುವ ಟ್ರಂಪ್, ತಮ್ಮ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ ಟ್ರೂತ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗೆ ವಾಣಿಜ್ಯ ಸಂಬಂಧಗಳನ್ನು ಕಾಯ್ದುಕೊಳ್ಳುವ ದೇಶಗಳು ಅಮೆರಿಕದೊಂದಿಗೆ ನಡೆಸುವ ಯಾವುದೇ ಮತ್ತು ಎಲ್ಲಾ ವ್ಯಾಪಾರಗಳ ಮೇಲೆ 25% ಸುಂಕವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಟ್ರಂಪ್ ಪ್ರಕಟಿಸಿದ್ದು, ಈ ನಿರ್ಧಾರವನ್ನು ಅಂತಿಮ ಹಾಗೂ ನಿರ್ಣಾಯಕ ಎಂದು ಕರೆದಿದ್ದಾರೆ.

ಟ್ರಂಪ್ ಸುಂಕ ಘೋಷಣೆಯಿಂದಾಗಿ ಭಾರತಕ್ಕೂ ಅನಾನುಕೂಲ ಉಂಟಾಗಲಿದ್ದು, ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಏರ್ಪಡುವ ಸಾಧ್ಯತೆ ಇದೆ. ಖೊಮೇನಿ ಸರ್ಕಾರದ ವಿರುದ್ಧ ಜನವರಿ ತಿಂಗಳ ಆರಂಭದಿಂದ ಶುರುವಾಗುತ್ತಿರುವ ಪ್ರತಿಭಟನೆ ಇರಾನಿನಾದ್ಯಂತ ಹರಡುತ್ತಿದೆ.

- Advertisement -

Latest News

error: Content is protected !!