ನವದೆಹಲಿ: ಗಿಗ್ ಕಾರ್ಮಿಕರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರದ ಮಧ್ಯ ಪ್ರವೇಶದ ನಂತರ ಕ್ವಿಕ್ ಇ-ಕಾಮರ್ಸ್ ಬ್ಲಿಂಕಿಟ್‌ನಿಂದ ಹತ್ತು ನಿಮಿಷಗಳ ಡೆಲಿವರಿ ಭರವಸೆ ರದ್ದುಗೊಂಡಿದೆ.
ಕೇಂದ್ರ ಕಾರ್ಮಿಕ ಇಲಾಖೆ ಸಚಿವ ಮನ್ಸುಖ್ ಮಾಂಡವೀಯ ಕ್ವಿಕ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಬಳಿಕ ಡೆಲಿವರಿ ಬಾಯ್‌ಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಹತ್ತು ನಿಮಿಷಗಳಲ್ಲಿ ಡೆಲಿವರಿ ಮಾಡುವ ಭರವಸೆಯಿಂದಾಗಿ ಕಾರ್ಮಿಕರ ಮೇಲೆ ಒತ್ತಡ ಸೃಷ್ಟಿಯಾಗಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಆತುರದ ಸೇವೆ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಬ್ಲಿಂಕಿಟ್ ತನ್ನ ಘೋಷವಾಕ್ಯ ಬದಲಿಸಿದ್ದು, ಜೆಪ್ಟೋ, ಸ್ವಿಗ್ಗಿ ಇನ್ಸ್ಟಾಮಾರ್ಟ್ ಮತ್ತು ಜೊಮ್ಯಾಟೊ ಸಂಸ್ಥೆಗಳಿಗೂ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಆತುರದ ಸಮಯದ ಮಿತಿಯನ್ನು ತೆಗೆದು ಹಾಕುವಂತೆ ನಿರ್ದೇಶನ ನೀಡಿದೆ.
ಇ-ಕಾಮರ್ಸ್ ಕಂಪೆನಿಗಳ ಆತುರದ ಸಮಯ ನಿಗದಿಗೆ ಗಿಗ್ ಕಾರ್ಮಿಕರು ಕೆಲವು ದಿನಗಳ ಹಿಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು.


