Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಿದ್ವತ್ ಪಿಯು ಕಾಲೇಜಿನ ಅಕ್ರಮ ಕಾಮಗಾರಿಗೂ ಬ್ರೇಕ್‌ ಹಾಕಿದ ಅಧಿಕಾರಿಗಳು

ಬೆಳ್ತಂಗಡಿ : ವಿದ್ವತ್ ಪಿಯು ಕಾಲೇಜಿನ ಅಕ್ರಮ ಕಾಮಗಾರಿಗೂ ಬ್ರೇಕ್‌ ಹಾಕಿದ ಅಧಿಕಾರಿಗಳು

- Advertisement -
- Advertisement -

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿರುವ ವಿದ್ವತ್ ಎಜುಕೇಶನ್ ಫೌಂಡೇಶನ್ ಸೇರಿದ ‘ವಿದ್ವತ್ ಪಿ.ಯು ಕಾಲೇಜ್’ ನಲ್ಲಿ ಯಾವುದೇ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಗಳನ್ನು ಪಡೆಯದೆ ನಾಲ್ಕನೇ ಮಹಡಿಯ ಕಟ್ಟಡ ಕಾಮಗಾರಿಯನ್ನು ನಡೆಸುತ್ತಿದ್ದರು‌. ಬಗ್ಗೆ ದೂರು ಬಂದಿತ್ತು. ಈ ದೂರಿನ ಬಗ್ಗೆ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ಜ.6 ರಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಕಾಮಗಾರಿ ಕೆಲಸ ನಡೆಯುತ್ತಿತ್ತು ಹಾಗೂ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿರುವುದರಿಂದ ವಿದ್ವತ್ ಕಾಲೇಜ್ ಅಧ್ಯಕ್ಷರಾದ ಸುಭಾಶ್ಚಂದ್ರ ಎಂಬವರಿಗೆ ತಿಳುವಳಿಕೆ-1 ನೋಟಿಸ್ ನೀಡಿದ್ದರು. ಇದರ ಬಳಿಕ ಮತ್ತೆ ಅಕ್ರಮವಾಗಿ ಕಾಮಗಾರಿಯ ಕೆಲಸವನ್ನು ಮುಂದುವರಿಸಿದ್ದರು. ಇದರ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಅಕ್ರಮ ಕಾಮಗಾರಿಗಳ ಬಗ್ಗೆ ಸ್ವವಿವರಗಳ ವರದಿಯನ್ನು ಬಿತ್ತರಿಸಿ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಗೊಳಿಸಿತ್ತು. ಇದರ ಬೆನ್ನಲ್ಲೇ ಕುವೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ಜ.8 ರಂದು ಸಂಜೆ ಕಾಲೇಜಿನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸುತ್ತಲೂ ಟೇಪ್ ಅಳವಡಿಸಿ ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ- ವೇಣೂರು ರಸ್ತೆಯ ಪಕ್ಕದಲ್ಲಿರುವ ಸರ್ವೆ ನಂಬರ್ 230/2 ರ 0.85 ಎಕ್ರೆಯಲ್ಲಿ ಸುಭಾಶ್ವಂದ್ರ ಎಂಬವರ ಮಾಲೀಕತ್ವದ ‘ಅಭ್ಯಾಸ್ ಪ್ರೀ ಯುನಿವರ್ಸಿಟಿ ಕಾಲೇಜ್’ ನಲ್ಲಿ ಸಕ್ಷಮ ಪ್ರಾಧಿಕಾರದಿಂದ ಎಚ್ಚರಿಕೆ ಟೇಪ್ ಅಳವಡಿಸಿ ಕಾಮಗಾರಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಸ್ಥಗಿತಗೊಳಿಸಲಾಗಿದೆ.ಇದನ್ನು ಉಲ್ಲಂಘಿಸಿ ಕಾಮಗಾರಿಯನ್ನು ಪುನರ್ ಆರಂಭಿಸಿದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಬಂಧಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಮತ್ತು ಕರ್ನಾಟಕ ಸರಕಾರ ಸುತ್ತೋಲೆ ಸಂಖ್ಯೆ ಆರ್.ಡಿ.ಪಿ.ಆರ್ /27/ಜಿಪಿಎ 2025 ದಿನಾಂಕ 13-05-2025 ರಂತೆ ಕಾನೂನು ಕ್ರಮವನ್ನು ಸಂಬಂಧಪಟ್ಟರವ ಮೇಲೆ ಜರುಗಿಸಲಾಗುವುದು ಎಂದು ಜ.8 ರಂದು ಸಂಜೆ 4 ಗಂಟೆಗೆ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ನೇತೃತ್ವದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ತಂಡ ಕಟ್ಟಡದ ಸುತ್ತಲೂ ಟೇಪ್ ಅಳವಡಿಸಿ ಎಚ್ಚರಿಕೆ ಬ್ಯಾನರ್ ಹಾಕಿದ್ದಾರೆ.

ಲಾಯಿಲ ಗ್ರಾಮದ ಕಾಶಿಬೆಟ್ಟು ಅಭ್ಯಾಸ್ ಪಿಯು ಕಾಲೇಜ್ ಮತ್ತು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಅಕ್ರಮ ಕಾಮಗಾರಿಗಳ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಸರಣೆ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಎರಡು ಕಾಲೇಜಿನ ಅಕ್ರಮ ಕಾಮಗಾರಿಗೆ ಟೇಪ್ ಅಳವಡಿಸಿ ಎಚ್ಚರಿಕೆ ಬ್ಯಾನರ್ ಅಳವಡಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನ ಬಿಗ್ IMPACT ವರದಿಯಾಗಿದೆ‌.

- Advertisement -

Latest News

error: Content is protected !!