- Advertisement -
![]()
- Advertisement -
ಬಂಟ್ವಾಳ; ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸದಾನಂದ ಎಂಬವರು ದಾಖಲಿಸಿದ್ದಾರೆ.
ದಿನಾಂಕ 07-01-2026 ರಂದು ಸದಾನಂದ ಬಂಟ್ವಾಳ ತಾಲೂಕು ರವರು ತನ್ನ ಮೊಬೈಲ್‌ನ ಫೇಸ್ ಬುಕ್ ಖಾತೆಯನ್ನು ಗಮನಿಸಿದಾಗ Billava Sandesh ಎಂಬ ಫೇಸ್ ಬುಕ್ ಖಾತೆಯಲ್ಲಿ ಸುಳ್ಯ ವಿಧಾನ ಸಭಾ ಶಾಸಕಿಯವರ ಫೋಟೊವನ್ನು ಅವಹೇಳನ ರೀತಿಯಲ್ಲಿ ಬರಹಗಳನ್ನು ಹಾಕಿ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಅದರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರರ್ಜಿ ದಾಖಲಾಗಿರುತ್ತದೆ.
- Advertisement -


