- Advertisement -
![]()
- Advertisement -
ಸುಳ್ಯ:ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅವಹೇಳಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ನಡೆದಿದೆ.
ಶಾಸಕಿಯ ಭಾವಚಿತ್ರವನ್ನು ಬಳಸಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದ್ದು, ಹೋರಾಟದ ಎಚ್ಚರಿಕೆ ನೀಡಲಾಗುತ್ತಿದೆ.
ಇನ್ನು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು, ʻವಿಶೇಷವಾಗಿ ಮಹಿಳಾ ಶಾಸಕರ ಮೇಲೆ ಹಾಗ ಜನಪ್ರತಿನಿಧಿಗಳ ವಿರುದ್ಧ ಅಸಭ್ಯ ಭಾಷೆ, ಬೆದರಿಕೆ ಅಥವಾ ಅವಮಾನಕಾರಿ ಹೇಳಿಕೆಗಳನ್ನು ಬಳಸುವುದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿ ಅಲ್ಲ- ಪ್ರಜಾಪ್ರಭುತ್ವದ ಮೌಲ್ಯಗಳು, ಮಹಿಳೆಯರ ಗೌರವ ಮತ್ತು ನಾಗರಿಕ ಸಂಸ್ಕೃತಿಯ ಮೇಲಿನ ನೇರ ದಾಳಿಯಾಗಿದೆ,ʼ ಎಂದು ಪೋಸ್ಟ್ ಬಗ್ಗೆ ತಿಳಿಸಿದೆ
- Advertisement -


