- Advertisement -
![]()
- Advertisement -
ಮಂಗಳೂರು: ಬಿಹಾರದಿಂದ ರೈಲು ಮೂಲಕ ಮಂಗಳೂರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ನಿವಾಸಿಗಳಾದ ಹಾಲಿ ಕೃಷ್ಣಾಪುರದಲ್ಲಿ ವಾಸವಿರುವ ಸುನಿಲ್ ಕುಮಾರ್, ಬ್ರಿಜೇಶ್ ಶ್ರೀವತ್ಸ ಬಂಧಿತರು.
ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿ ಆರೋಪಿತರಿಂದ ಸುಮಾರು 1 ಕೆ.ಜಿ ಮಾದಕ ವಸ್ತು ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿತರನ್ನು ವಿಚಾರಣೆ ನಡೆಸಿದಾಗ ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಲ್ಲಿ ಖರಿಧಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸರು ಮೊ.ನಂ 08-2026 ಕಲಂ (c), 20(b)(ii)(a) NDPS Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುತ್ತಾರೆ.
- Advertisement -


