Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವನ್ಯಜೀವಿ ವಿಭಾಗದಿಂದ ಹುಲಿ ಗಣತಿ ಹಿನ್ನೆಲೆ; ನಾಳೆಯಿಂದ ಗಡಾಯಿಕಲ್ಲು ಸೇರಿದಂತೆ ಫಾಲ್ಸ್ ಗಳು...

ಬೆಳ್ತಂಗಡಿ : ವನ್ಯಜೀವಿ ವಿಭಾಗದಿಂದ ಹುಲಿ ಗಣತಿ ಹಿನ್ನೆಲೆ; ನಾಳೆಯಿಂದ ಗಡಾಯಿಕಲ್ಲು ಸೇರಿದಂತೆ ಫಾಲ್ಸ್ ಗಳು ಬಂದ್

- Advertisement -
- Advertisement -

ಬೆಳ್ತಂಗಡಿ : ವನ್ಯಜೀವಿ ವಿಭಾಗದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಹುಲಿ ಗಣತಿ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆಯಲ್ಲಿ ಜ.5 ರಿಂದ ಗಡಾಯಿಕಲ್ಲು, ನೇತ್ರಾವತಿ ಪೀಕ್,ಬಂಡಾಜೆ ಫಾಲ್ಸ್, ಬೊಳ್ಳೆ ಫಾಲ್ಸ್ ,ಕಡಂಬ ಗುಂಡಿ ಫಾಲ್ಸ್ ಗಳು ಚಾರಣ ಪ್ರಿಯರಿಗೆ ಪ್ರವೇಶ ಮಾಡದಂತೆ ಬಂದ್ ಮಾಡಲಾಗಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಜ.5 ರಿಂದ ಹುಲಿಗಣತಿ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಆರಂಭ ಮಾಡಲಿರುವ ಕಾರಣದಿಂದ ಚಾರಣ ಪ್ರಿಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಚಾರಣ ಪ್ರಿಯರಿಗೆ ನೇತ್ರಾವತಿ ಪೀಕ್ ಮತ್ತು ಬಂಡಾಜೆ ಫಾಲ್ಸ್ ಜ.13 ರಿಂದ ಆರಂಭವಾಗಲಿದ್ದು. ಗಡಾಯಿಕಲ್ಲು, ಬೊಳ್ಳೆ ಫಾಲ್ಸ್, ಕಡಂಬ ಗುಂಡಿ ಜ.14 ರಿಂದ ಪ್ರವೇಶಗಳು ಆರಂಭವಾಗಲಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಆರ್.ಎಫ್.ಒ ಶರ್ಮಿಷ್ಠಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!