Friday, June 26, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕೊಕ್ಕಡದಲ್ಲಿ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಕೊಕ್ಕಡದಲ್ಲಿ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳ್ತಂಗಡಿ: ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಕ್ಕಡದಲ್ಲಿ ಜನವರಿ 2 ರಂದು ಮಧ್ಯಾಹ್ನ ನಡೆದಿದೆ. ಕೊಕ್ಕಡ ಗ್ರಾಮದ ಹಳ್ಳಿಂಹೇರಿ ನಿವಾಸಿ  ನಿವಾಸಿ ಅಜಯ್ ಕುಮಾರ್ (39) ಆತ್ಮಹತ್ಯೆಗೆ ಶರಣಾದವರು.

ಕೊಕ್ಕಡ ಪ್ರಾಥಮಿಕ ಆರೋಗ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕುಂಞಕಣ್ಣನ್ ಎಂಬವರ ಮಗನಾಗಿರುವ ಅಜಯ್ ಈ ಹಿಂದೆ ಸೌತಡ್ಕ ಅನ್ನಛತ್ರದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಸ್ವಂತ ಆಟೋ ಖರೀದಿಸಿ ಓಡಿಸುತ್ತಿದ್ದರು. ಜನವರಿ 2 ರಂದು ಊಟ ಮಾಡಿದ ಬಳಿಕ ಮನೆಯಲ್ಲೇ ಅಜಯ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!