Thursday, June 25, 2026
Homeಕರಾವಳಿಮಂಗಳೂರುಹೊಸ ವರ್ಷದ ಮೊದಲ ದಿನವೇ ಹೋಟೆಲ್ ಉದ್ಯಮದವರಿಗೆ ಬಿಗ್ ಶಾಕ್; ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ ದರ...

ಹೊಸ ವರ್ಷದ ಮೊದಲ ದಿನವೇ ಹೋಟೆಲ್ ಉದ್ಯಮದವರಿಗೆ ಬಿಗ್ ಶಾಕ್; ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ ದರ ಏರಿಕೆ

- Advertisement -
- Advertisement -

ನವದೆಹಲಿ;ಹೊಸ ವರ್ಷದ ಮೊದಲ ದಿನವೇ ಹೋಟೆಲ್ ಉದ್ಯಮದವರಿಗೆ ಬಿಗ್ ಶಾಕ್ ಎದುರಾಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ ದರ ಏರಿಕೆಯಾಗಿದೆ.

2025ರಲ್ಲಿ 200 ರೂ.ಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು ಏರಿಕೆಯಾಗಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ.

ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.

- Advertisement -

Latest News

error: Content is protected !!