Thursday, June 4, 2026
Homeಅಪರಾಧಉಡುಪಿ ಜಿಲ್ಲಾ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆ ಹ್ಯಾಕ್

ಉಡುಪಿ ಜಿಲ್ಲಾ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆ ಹ್ಯಾಕ್

- Advertisement -
- Advertisement -

ಉಡುಪಿ ಜಿಲ್ಲಾ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನ ಸೈಬ‌ರ್ ವಂಚಕರು ಹ್ಯಾಕ್ ಮಾಡಿದ್ದಾರೆ.

ಸೈಬರ್ಶಾ ವಂಚಕರು ಶಾಸಕರ ಸಂಪರ್ಕದಲ್ಲಿರುವವರ ಸಂಖ್ಯೆಗೆ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ನಿಮ್ಮಿಂದ ನನಗೆ ಒಂದು ಅಗತ್ಯ ಸಹಾಯವಾಗಬೇಕೆಂದು ಹೇಳಿ, ಆ ಬಳಿಕ ಹಣದ ಅವಶ್ಯಕತೆಯಿದೆ ಎಂದು ಮೆಸೇಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಶಾಸಕರು ತಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದು, ತನ್ನ ಸ್ನೇಹಿತರ ವಲಯಕ್ಕೆ ಎಚ್ಚರದಿಂದ ಇರುವಂತೆ ಹೇಳಿದ್ದಾರೆ. ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿದ್ದು ದಯವಿಟ್ಟು ಯಾರು ಹಣ ನೀಡದಂತೆ ವಿನಂತಿಯನ್ನು ಶಾಸಕರ ಕಚೇರಿಯಿಂದ ಮಾಡಿಕೊಳ್ಳಲಾಗಿದೆ.

- Advertisement -

Latest News

error: Content is protected !!