Wednesday, June 3, 2026
Homeಕರಾವಳಿಮಂಗಳೂರುಗಾಂಜಾ ನಶೆಯಲ್ಲಿ ಯುವಕ ಕೊಲೆ;  ಮರ್ಡರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಟ್ಟ ಪಾಪಿಗಳು

ಗಾಂಜಾ ನಶೆಯಲ್ಲಿ ಯುವಕ ಕೊಲೆ;  ಮರ್ಡರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಟ್ಟ ಪಾಪಿಗಳು

- Advertisement -
- Advertisement -

ಹಾಸನ; ಗಾಂಜಾ ನಶೆಯಲ್ಲಿ ಯುವಕನನ್ನು ಕೊಲೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪಾಪಿಗಳು ನಾವು ಮರ್ಡರ್ ಮಾಡಿದ್ದೇವೆ ಎಂದು ವೀಡಿಯೋ ಹರಿ ಬಿಟ್ಟ ಭಯಾನಕ ಘಟನೆ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಬಿಟ್ಟಗೌಡನಹಳ್ಳಿಯಲ್ಲಿನಡೆದಿದೆ. ಕೀರ್ತಿ ( 24 ) ಕೊಲೆಯಾದ ಯುವಕ. ಉಲ್ಲಾಸ್ ಎಂಬಾತ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ.

ಕೀರ್ತಿ ಹಾಸನ ತಾಲೂಕಿನ ಹೂವಿನಹಳ್ಳಿ ಗ್ರಾಮದವನಾಗಿದ್ದು, ಹಾಸನ ನಗರದ ಗ್ಯಾರೇಜ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕೀರ್ತಿಯನ್ನು ಆತನ ಸ್ನೇಹಿತರೇ ಆದ ಉಲ್ಲಾಸ್ ಸೇರಿದಂತೆ ಮೂವರು ಆರೋಪಿಗಳು ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಿ ಎಸ್ಕೇಪ್ ಆಗಿದ್ದಾರೆ. ಕೊಂದ ಬಳಿಕ ಕೀರ್ತಿ ಮೃತದೇಹದ ಮುಂದೆ ನಿಂತು ನಾವು ಕೊಂದಿದ್ದೇವೆ ಅಂತಾ ವಿಡಿಯೋ ಮಾಡಿಕೊಂಡೇ ಎಸ್ಕೇಪ್ ಆಗಿದ್ದಾರೆ. ವಿಡಿಯೋದಲ್ಲಿ ಉಲ್ಲಾಸ್ ಎಂಬ ಆರೋಪಿ ಜೊತೆ ಮತ್ತಿಬ್ಬರು ಓಡಿಹೋಗಿದ್ದಾರೆ. ವಿಡಿಯೋ ಹಾಗೂ ಸಂಬಂಧಿಕರ ಮಾಹಿತಿಯ ಆಧಾರದ ಮೇಲೆ ಹಾಸನ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ಎಎಸ್ಪಿ ಶ್ರೀನಿಧಿ‌ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ‌‌ನೀಡಿ ಪರಿಶೀಲನೆ ನಡೆಸಿದ್ರು. ಇನ್ನು ಈ ಘಟನೆ ನಿನ್ನೆ ಸಂಜೆಯೇ ನಡೆದಿರೋ ಸಾಧ್ಯತೆ ಹೆಚ್ಚಿದ್ದು, ಕೀರ್ತಿಯನ್ನು ಕೊಂದು ವಿಡಿಯೋ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆಯೇ ಮಾಡಿಕೊಂಡಿರೋ ವಿಡಿಯ ಫೊಸ್ಟ್ ಹಾಗೂ ಶೇರ್ ಮಾಡಿದ್ದಾರೆ. ಆ ವಿಡಿಯೋ ಆಧಾರವಾಗಿಟ್ಟುಕೊಂಡು ಸಂಬಂಧಿಕರು ಹಾಗೂ ಪೊಲೀಸರು ಹುಡುಕಾಟ ನಡೆಸಿ ಕೊಲೆಯಾದ ಸ್ಥಳವನ್ನು ಪತ್ತೆ ಮಾಡಿದ್ದಾರೆ. ಕೊಲೆಯಾದ ಕೀರ್ತಿ ಹಾಗೂ ಕೊಲೆಮಾಡಿದವರೆಲ್ಲರೂ ಸ್ನೇಹಿತರೇ, ಎಣ್ಣೆ ಗಾಂಜಾ ಸೇರಿದಂತೆ ಮತ್ತಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಮಾಡಿಕೊಂಡು ಒಬ್ಬರಿಗೊಬ್ಬರು ಒಡೆದಾಡಿಕೊಂಡು ಕೀರ್ತಿಯನ್ನು ಕೊಂದಿರಬಹುದೆಂದು ಶಂಕಿಸಲಾಗಿದೆ. ಕೊಲೆ ಆರೋಪಿಗಳ‌ ಸಿಕ್ಕಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ

- Advertisement -

Latest News

error: Content is protected !!