Sunday, June 7, 2026
Homeಕರಾವಳಿಉಡುಪಿಉಡುಪಿ; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಉಡುಪಿ; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

- Advertisement -
- Advertisement -

ಉಡುಪಿ; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಸಮೀಪ ನಡೆದಿದೆ.

ನಾಗರಾಜ ಖಾರ್ವಿ(33)  ಮೃತಪಟ್ಟ ಬೈಕ್ ಸವಾರ.

ಶ್ರೀಧರ ಖಾರ್ವಿ (33) ದುರ್ಗಾ ಖಾರ್ವಿ ಉಪ್ಪುಂದ ಬೈಂದೂರು ಅವರು ತಮ್ಮ ಸ್ನೇಹಿತರಾದ ಗಂಗಾಧರ ಖಾರ್ವಿ ಯವರೊಂದಿಗೆ ಉಪ್ಪುಂದ ಕಂಬದಕೋಣೆ ಸೊಸೈಟಿಯ ಎದುರು ಉಪ್ಪುಂದದ ಉಪ್ಪಿನಕೋಟೆ ಕಡೆಗೆ ಹೋಗುವ ರಸ್ತೆಯ ತಿರುವಿನಲ್ಲಿ ನಿಂತುಕೊಂಡಿರುವಾಗ ರಾ ಹೆ 66 ರ ಪಶ್ಚಿಮ ಪಥದ ರಸ್ತೆಯಲ್ಲಿ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಗಣೇಶ ಟ್ರಾವೆಲ್ಸ್ ಬಸ್ಸನ್ನು ಅದರ ಚಾಲಕ ಶಿವರಾಜ ಬಸ್ಸನ್ನು ಅತೀ ವೇಗ ಹಾಗೂ ಅಜಾಗೂರಕತೆಯಿಂದ ರಸ್ತೆಯ ತೀರ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಬೈಕ್  ಸವಾರ ನಾಗರಾಜ ಖಾರ್ವಿ ರವರಿಗೆ ಡಿಕ್ಕಿ ಹೋಡೆದ ಪರಿಣಾಮ ನಾಗರಾಜ ಖಾರ್ವಿಯವರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ತಲೆಯ ಭಾಗ ಒಡೆದು ಹೋಗಿದ್ದು ಅವರನ್ನು ಕೂಡಲೇ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!