Monday, June 15, 2026
Homeಕರಾವಳಿಮಂಗಳೂರುಮಂಗಳೂರು: ಅಧಿಕ ಲಾಭದ ಆಸೆಗೆ ಬಿದ್ದು ಬರೋಬ್ಬರಿ 33 ಲಕ್ಷ ಕಳೆದುಕೊಂಡ ತರಕಾರಿ ಮತ್ತು ಹಣ್ಣು...

ಮಂಗಳೂರು: ಅಧಿಕ ಲಾಭದ ಆಸೆಗೆ ಬಿದ್ದು ಬರೋಬ್ಬರಿ 33 ಲಕ್ಷ ಕಳೆದುಕೊಂಡ ತರಕಾರಿ ಮತ್ತು ಹಣ್ಣು ವ್ಯಾಪಾರಿ

- Advertisement -
- Advertisement -

ಮಂಗಳೂರು: ಅಧಿಕ ಲಾಭದ ಆಸೆಗೆ ಬಿದ್ದು ತರಕಾರಿ ಮತ್ತು ಹಣ್ಣು ವ್ಯಾಪಾರಿ ಬರೋಬ್ಬರಿ 33 ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
34 ವರ್ಷ ಪ್ರಾಯದ ತರಕಾರಿ ಮತ್ತು ಹಣ್ಣು ವ್ಯಾಪಾರಿಗೆ ಕಳೆದ ಸೆಪ್ಟಂಬರ್ 2025 ನೇ ಸಾಲಿನಲ್ಲಿ ಯಾರೋ ಅಪರಿಚತ ವ್ಯಕ್ತಿ ಫೇಸ್ ಬುಕ್ ಮುಖಾಂತರ ಲಿಂಕ್ ಕಳುಹಿಸಿದ್ದಾರೆ. ಅದನ್ನು ಇವರು ಕ್ಲಿಕ್ ಮಾಡಿದ ವೇಳೆ ಅದು ವಾಟ್ಸ್ ಆಪ್ ನಂಬ್ರ:9119453097 ನೇದಕ್ಕೆ ಸಂಪರ್ಕ ಹೊಂದಿದೆ.

ಬಳಿಕ ಆ ನಂಬರ್ ನಲ್ಲಿರುವ ವ್ಯಕ್ತಿ ಹಣ ಹೂಡಿಕೆ ಮಾಡುವ ಬಗ್ಗೆ ವ್ಯಾಪಾರಿಗೆ ತಿಳಿಸಿದ್ದಾನೆ. ಅಲ್ಲದೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿ ನಂತರ ವ್ಯಾಪಾರಿಗೆ ZARABET ಎಂಬ ಹೂಡಿಕೆ ಆಪ್ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ವ್ಯಾಪಾರಿ ಆ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿಯು ಮೊದಲಿಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ಪಿರ್ಯಾದಿದಾರರು ದಿನಾಂಕ:24-09-2025 ರಂದು 30,000/- ರೂ ಹಣ ವರ್ಗಾಯಿಸಿರುತ್ತಾರೆ ಅದಕ್ಕೆ ಪ್ರತಿಯಾಗಿ ವ್ಯಾಪಾರಿ 34,000/- ರೂ ಲಾಭಾಂಶ ನೀಡಿರುತ್ತಾರೆ.ಇದನ್ನು ಸತ್ಯವೆಂದು ಭಾವಿಸಿದ ವ್ಯಾಪಾರಿ ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬೇರೆ ಬೇರೆ ಸ್ಕ್ಯಾನರ್ ಗಳಿಗೆ ಮತ್ತು ಖಾತೆಗಳಿಗೆ ಗೂಗಲ್ ಪೇ ಮತ್ತು IMPS ಮೂಲಕ ದಿನಾಂಕ:24-09-2025 ರಿಂದ 03-12-2025 ರವರೆಗೆ ಹಂತ ಹಂತವಾಗಿ ಪಿರ್ಯಾದಿದಾರರ ಬಾಬ್ತು ಬ್ಯಾಂಕ್ ಆಫ್ ಬರೋಡಾ ಖಾತೆಗಳಿಂದ ಒಟ್ಟು 33,11,000/- ರೂಗಳನ್ನು ವರ್ಗಾಯಿಸಿದ್ದಾರೆ. ನಂತರ ಆ ಅಪರಿಚಿತ ವ್ಯಕ್ತಿಗಳಲ್ಲಿ ವ್ಯಾಪಾರಿ ಹೂಡಿಕೆ ಮಾಡಿದ ಹಣವನ್ನು ವಾಪಾಸು ನೀಡುವಂತೆ ಅಪರಿಚಿತ ವ್ಯಕ್ತಿಯ ವಾಟ್ಸ್ ಆಪ್ ನಂಬ್ರಗಳಾದ: 9119453097 ಮತ್ತು 7202983189 ನೇ ದಕ್ಕೆ ಕರೆ ಮಾಡಿ ಕೇಳಿಕೊಂಡಾಗ, ವ್ಯಾಪಾರಿಗೆ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಹಾಗೂ ಸರ್ವೀಸ್ TAX ಪಾವತಿ ಮಾಡುವಂತೆ ಒತ್ತಾಯಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ಅವರು ಹೇಳಿದಂತೆ ಸ್ವಲ್ಪ ಹಣ ಪಾವತಿಸಿದ್ದು ನಂತರ ಯಾವುದೇ ಹೂಡಿಕೆ ಮಾಡಿದ ಹಣವನ್ನಾಗಲಿ ಮತ್ತು ಲಾಭಾಂಶವನ್ನಾಗಲಿ ವಾಪಾಸು ನೀಡದೇ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಒತ್ತಾಯಿಸಿರುತ್ತಾರೆ. ಇದರಿಂದ ವ್ಯಾಪಾರಿ ಅನುಮಾನ ಬಂದು ತಮ್ಮ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ವ್ಯಾಪಾರಿಗೆ ಗೊತ್ತಾಗಿದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಹೂಡಿಕೆ ಹೆಸರಿನಲ್ಲಿ ZARABET ಎಂಬ ಹೂಡಿಕೆ ಆಪ್ ನಲ್ಲಿ ಆನ್ ಲೈನ್ ಮುಖಾಂತರ ಮೋಸದಿಂದ ಹಣ ವರ್ಗಾಯಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ. ಹಣ ವರ್ಗಾಯಿಸಿಕೊಂಡ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆ ಸಂಖ್ಯೆ:84071023316 ಹಾಗೂ IFSC CODE: SBIN0RRVCGB ಆಗಿರುತ್ತದೆ. ಮೋಸ ಹೋಗಿದ್ದು ಗೊತ್ತಾದ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!