Friday, June 26, 2026
Homeಕರಾವಳಿಉಡುಪಿಉಡುಪಿ: ಮನೆಯ ಹೊರಗಡೆ ಕೀ ಇಟ್ಟು ಸೇಫ್ ಆಗಿದೆ ಅಂದುಕೊಳ್ಳುವ ಮುನ್ನ ಎಚ್ಚರ: ಕರೆಂಟ್ ಮೀಟರ್...

ಉಡುಪಿ: ಮನೆಯ ಹೊರಗಡೆ ಕೀ ಇಟ್ಟು ಸೇಫ್ ಆಗಿದೆ ಅಂದುಕೊಳ್ಳುವ ಮುನ್ನ ಎಚ್ಚರ: ಕರೆಂಟ್ ಮೀಟರ್ ಬಳಿ ಇಟ್ಟಿದ್ದ ಕೀ ಬಳಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳ

- Advertisement -
- Advertisement -

ಉಡುಪಿ: ಮನೆಯ ಹೊರಗಡೆ ಕೀ ಇಟ್ಟು ಸೇಫ್ ಆಗಿದೆ ಅಂದುಕೊಳ್ಳುವ ಎಲ್ಲರೂ ಈ ಸುದ್ದಿ ಓದಲೇ ಬೇಕು.ಮನೆಯ ಹೊರಗೆ ಕರೆಂಟ್ ಮೀಟರ್ ಬಳಿ ಇಟ್ಟಿದ್ದ ಕೀ ಬಳಸಿ ಖತರ್ನಾಕ್ ಕಳ್ಳನೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.


ಕಾಪುವಿನ ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಅವರು 04.12.2025 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ತಾಯಿಯವರನ್ನು ತಮ್ಮ ಅಕ್ಕನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಬಳಿಕ ಅವರ ಪತ್ನಿ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 9.45 ಗಂಟೆಗೆ ಮನೆಯನ್ನು ಹೊರಗಿನಿಂದ ಬೀಗ ಹಾಕಿ ಕೀ ಯನ್ನು ಮನೆಯ ವಿದ್ಯತ್‌ ಮೀಟರ್‌ ನ ಬಾಕ್ಸ್ ನಲ್ಲಿ ಇರಿಸಿ ಹೋಗಿದ್ದಾರೆ.

ಇದೇ ವೇಳೆ ಬಂದ ಕಳ್ಳರು ಮನೆಯ ವಿದ್ಯುತ್‌ ಮೀಟರ್‌ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀ ಇಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳಗಿನಿಂದ ಲಾಕ್‌ ಮಾಡಿಕೊಂಡು ಮನೆಯಲ್ಲಿದ್ದ ಸುಮಾರು ರೂಪಾಯಿ 3,90,000/- ಮೌಲ್ಯದ ಸುಮಾರು 72 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ಸುಮಾರು 1,500/- ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!