Sunday, June 7, 2026
Homeತಾಜಾ ಸುದ್ದಿಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ನಾಲ್ವರು ಯುವಕರು ಸಾವು

ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ನಾಲ್ವರು ಯುವಕರು ಸಾವು

- Advertisement -
- Advertisement -

ಬಾಗಲಕೋಟೆ: ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ  ತಾಲೂಕಿನ ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿ ಬಳಿ ನಿನ್ನೆ ರಾತ್ರಿ 12.30ಕ್ಕೆ ನಡೆದಿದೆ.

ಸಿದ್ದಾಪುರ ಗ್ರಾಮದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್ ಶೇಡಬಾಳ(17) ಮೃತರು.

ಸಿದ್ದಾಪುರ ಗ್ರಾಮದಿಂದ ಸ್ನೇಹಿತರು ಸೇರಿಕೊಂಡು ತಡರಾತ್ರಿ ಶಿರೋಳ ಕಾಡಸಿದ್ದೇಶ್ವರ ದೇವರ ಜಾತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.ಜಮಖಂಡಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!