Monday, June 8, 2026
Homeಚಿಕ್ಕಮಗಳೂರುಚಿಕ್ಕಮಗಳೂರು;ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ

ಚಿಕ್ಕಮಗಳೂರು;ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ

- Advertisement -
- Advertisement -

ಚಿಕ್ಕಮಗಳೂರು;ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ. ಸಂಧ್ಯಾ (33) ಹತ್ಯೆಯಾದ ಮಹಿಳೆ.

ಸಂಧ್ಯಾ ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಕತ್ತು ಸೀಳಿ ಹಂತಕ ಎಸ್ಕೇಪ್ ಆಗಿದ್ದಾನೆ. ವಿವಾಹವಾಗಿದ್ದ ಸಂಧ್ಯಾ ಗಂಡನನ್ನು ಬಿಟ್ಟು ತವರು ಮನೆಯಲ್ಲಿದ್ದರು. ಸಂಧ್ಯಾ ಕಳೆದ ನಾಲ್ಕು ದಿನದಿಂದ ನಾಪತ್ತೆಯಾಗಿದ್ದರು. ನಾಪತ್ತೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ನಿನ್ನೆ ಸಂಜೆ ಅರೆನೂರು ಗ್ರಾಮದ ತಮ್ಮ ಮನೆಗೆ ಸಂಧ್ಯಾ ವಾಪಸ್ ಬಂದಿದ್ದರು. ಇಂದು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇನ್ನು ಚಾಕು ಇರಿಯುತ್ತಿದ್ದಂತೆ ಕುಸಿದು ಬಿದ್ದ ಸಂಧ್ಯಾ ಗೋಡೆ ಹಿಡಿದು ಏಳಲು ಯತ್ನಿಸಿದ್ದಾರೆ. ಗೋಡೆ ಮೇಲೆ ಆಕೆಯ ರಕ್ತಮಿಶ್ರಿತ ಹಸ್ತದ ಗುರುತು ಪತ್ತೆಯಾಗಿದೆ. ಬದುಕುವ ಧಾವಂತದಲ್ಲಿ ಮನೆಯ ತುಂಬಾ ಚೆಲ್ಲಾಡಿರೋ ರಕ್ತ ಬದುಕೋದಕ್ಕೆ ಕೊನೆ ಕ್ಷಣದಲ್ಲಿ ಆಕೆ ಮಾಡಿದ ಹೋರಾಟದ ಕುರುಹುವನ್ನು ಎತ್ತಿ ತೋರಿಸುತ್ತಿತ್ತು. ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!