Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಕಾವೂರು ಠಾಣಾ ವ್ಯಾಪ್ತಿಯ  ಬಂಗ್ರ-ಕೂಳೂರು ಘಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ...

ಮಂಗಳೂರು; ಕಾವೂರು ಠಾಣಾ ವ್ಯಾಪ್ತಿಯ  ಬಂಗ್ರ-ಕೂಳೂರು ಘಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು; ಕಾವೂರು ಠಾಣಾ ವ್ಯಾಪ್ತಿಯ  ಬಂಗ್ರ-ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ ಪ್ರಕರಣ;ಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ,  ತುಮಕೂರಿನ ಪಿ.ಹೆಚ್. ಕಾಲೋನಿ ನಿವಾಸಿಗಳಾದ ಶಾಫಿ  ಅಹ್ಮದ್ (40), ಮೊಹಮ್ಮದ್ ಸಮೀರ್ (20) ಬಂಧಿತ ಆರೋಪಿಗಳು.

ಬಂಧಿತರಿಂದ ಅವರ ಬಳಿಯಿದ್ದ ಸುಮಾರು 12 ಗ್ರಾಂ ಎಂ.ಡಿ.ಎಂ (ಅಂದಾಜು ಮೌಲ್ಯ ರೂ.70,000/-) ಹಾಗೂ 275 ಗ್ರಾಂ  ಗಾಂಜಾ (ಅಂದಾಜು ಮೌಲ್ಯ ರೂ. 10,000/-) ಮತ್ತು 2 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು,  ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ  ಅ.ಕ್ರ. 177/2025 ಕಲಂ: 8(C), 21(C), 20(B)  NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆರೋಪಿಗಳು ಗಾಂಜಾ ಮತ್ತು ಎಂ.ಡಿ.ಎಂ ನ್ನು ಬೆಂಗಳೂರಿನಲ್ಲಿ ನಿಗ್ರೋಗಳ ಬಳಿ ಖರೀದಿಸಿರುವುದಾಗಿ ತಿಳಿಸಿರುತ್ತಾರೆ.

ಆರೋಪಿ ಶಾಫಿ ಅಹ್ಮದ್ ಎಂಬಾತನ ಮೇಲೆ ಕೆಳಗಿನಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು ಆತನು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ  ತಲೆಮರೆಸಿಕೊಂಡಿದ್ದು ನ್ಯಾಯಾಲಯವು ವಾರಂಟ್ ಹಾಗೂ ಪ್ರೊಕ್ಲಮೇಶನ್ ಜಾರಿಗೊಳಿಸಿರುತ್ತದೆ.

- Advertisement -

Latest News

error: Content is protected !!