Thursday, June 4, 2026
HomeUncategorizedಬಂಟ್ವಾಳ; ಅಕ್ರಮ‌ ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

ಬಂಟ್ವಾಳ; ಅಕ್ರಮ‌ ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

- Advertisement -
- Advertisement -

ಬಂಟ್ವಾಳ; ಅಕ್ರಮ‌ ಕೋಳಿ ಅಂಕಕ್ಕೆ ದಾಳಿ ಮಾಡಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಬಂಟ್ವಾಳ ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ನಡೆದಿದೆ. ಬಂಟ್ವಾಳ, ಇಡ್ಕಿದು ಗ್ರಾಮದ ನಿವಾಸಿ ಉಮೇಶ (38),. ಬಂಟ್ವಾಳ, ಅನಂತಾಡಿ ಗ್ರಾಮದ ನಿವಾಸಿ ಅಣ್ಣು (38), ಬಂಟ್ವಾಳ, ವೀರಕಂಭ ಗ್ರಾಮದ ನಿವಾಸಿ ಉಮೇಶ್‌ (30) ಬಂಧಿತರು.

ದಿನಾಂಕ:30-11-2025 ರಂದು ಸಂಜೆ, ಅಕ್ರಮವಾಗಿ ಕೋಳಿ ಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಬಿ ಎಸ್ ನಾಯಕ್ ರವರು ಸಿಬ್ಬಂದಿಯೊಂದಿಗೆ, ಸ್ಥಳಕ್ಕೆ ಹೋದಾಗ ಸಾರ್ವಜನಿಕ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ಆಡುತ್ತಿದ್ದು ಗೊತ್ತಾಗಿದೆ . ಅವರುಗಳ ಪೈಕಿ ಮೂವರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರು ಪರಾರಿಯಾಗಿರುತ್ತಾರೆ.

ಆರೋಪಿಗಳ ತಪಾಸಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ ರೂ 2,100/-ನಗದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿಗಳು, ಕೋಳಿ ಅಂಕಕ್ಕೆ ಬಳಸಿದ ಕತ್ತಿ ಹಾಗೂ ದಾರಗಳು  ಪತ್ತೆಯಾಗಿರುತ್ತದೆ.  ಸೊತ್ತುಗಳನ್ನು  ಸ್ವಾಧೀನಪಡಿಸಿಕೊಂಡು. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!