Saturday, June 6, 2026
Homeಕರಾವಳಿಮಂಗಳೂರುಪುತ್ತೂರು;  ಪಡೀಲ್ ನಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ  ಪತ್ತೆ

ಪುತ್ತೂರು;  ಪಡೀಲ್ ನಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ  ಪತ್ತೆ

- Advertisement -
- Advertisement -

ಪುತ್ತೂರು;  ಪಡೀಲ್ ನಿಂದ ನಾಪತ್ತೆಯಾಗಿದ್ದ ಯುವಕ ಬದ್ರುದ್ದೀನ್ ಡಿಕೆ (27) ಶವವಾಗಿ ಪತ್ತೆಯಾಗಿದ್ದಾರೆ. ಬದ್ರುದ್ದೀನ್ ಮೃತದೇಹವು ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ.

ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲೀಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.

ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ತೆರಳಿದವರು ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿತ್ತು.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಯುವಕನ ಮೃತದೇಹ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!