Friday, June 5, 2026
Homeಕರಾವಳಿಉಡುಪಿಉಡುಪಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ಭಜನಾ ತಂಡ; ಭಜನೆಯಿಂದ ಭಗವಂತನನ್ನು ಕಾಣಬಹುದು: ವೀರುಶೆಟ್ಟಿ   

ಉಡುಪಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ಭಜನಾ ತಂಡ; ಭಜನೆಯಿಂದ ಭಗವಂತನನ್ನು ಕಾಣಬಹುದು: ವೀರುಶೆಟ್ಟಿ   

- Advertisement -
- Advertisement -

ಬೆಳ್ತಂಗಡಿ: ಭಜನೆ ಭಗವಂತನ್ನು ಒಲಿಸುವ ಸುಲಭದ ಸಾಧನವಾಗಿದ್ದು ಇಂದು ಮಕ್ಕಳು ಶಾಲೆ ಹೊಗುವ ಮೊದಲೇ ಭಜನೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದರೆ ಇದಕ್ಕೆ ಕಳೆದ 27 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರಿ ಧ.ಮಂ ಭಜನಾ ಪರಿಷತ್ ಮೂಲಕ ನಡೆಸುತ್ತಿರುವ ಭಜನಾ ಕಮ್ಮಟವೇ ಪ್ರೇರಣೆ. ಭಜನೆಯಿಂದ ದೇವರನ್ನು ಕಾಣುವ ಜೊತೆಗೆ ಮನೆ ಮನೆಗಳಲ್ಲಿ ಸಂಸ್ಕಾರವನ್ನು ಬೆಳೆಸಲು ಸಾಧ್ಯ ಎಂದು ಶ್ರಿ ಧ.ಮಂ ಭಜನಾ ಪರಿಷತ್ ನ ಕಾರ್ಯದರ್ಶಿ ವೀರು ವಿ ಶೆಟ್ಟಿ ಹೇಳಿದರು.    

ಅವರು ನ.30 ರಂದು ಭಾನುವಾರ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇದರ ವಿಶ್ವ ಗೀತಾ ಪರ್ಯಾಯ 2024-26 ಇದರ ಗೀತೋತ್ಸವ ಪ್ರಯುಕ್ತ ನಡೆಯುವ ಲಕ್ಷಕಂಠ ಗೀತಾ ಭಜನೋತ್ಸವ‌ಕ್ಕೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಎರಡು ಸಾವಿರದ ಐನೂರಕ್ಕು ಅಧಿಕ ಭಜಕರು ಭಾಗವಹಿಸುತ್ತಿದ್ದು ಇದಕ್ಕೆ ಚಾಲನೆ ನೀಡಿ ಮಾತನಾಡಿ  ಇಂದು ಅನೇಕ ಪುಟಾಣಿಗಳು ಭಜನೆಯಲ್ಲಿ ಭಾಗವಹಿಸಿದರೆ ಭಗವಾನ್ ಶ್ರಿಕೃಷ್ಣನಿಗೂ ಸಂತೋಷವಾಗಬಹುದು. ಎಲ್ಲಾ ಭಜಕರಿಗೂ ಶ್ರಿಕೃಷ್ಣನ ಅನುಗ್ರಹ ಸಿಗುವಂತಾಗಲಿ. ಸಾವಿರಾರು ಭಜಕರನ್ನು ಶಿಸ್ತುಬದ್ಧವಾಗಿ ರೂಪಿಸಿದ ಎಲ್ಲಾ ಭಜನಾ ತರಬೇತಿದಾರರಿಗೆ ಅಭಿನಂದನೆಗಳು ಎಂದರು.  

ಧರ್ಮಸ್ಥಳ ಅನ್ನಪೂರ್ಣ ಅನ್ನಛತ್ರದ ಮೇಲ್ವಿಚಾರಕ ಸುಬ್ರಹ್ಮಣ್ಯ ಪ್ರಸಾದ್ ಭಟ್ ಮಾತನಾಡಿ ನಾನು ಎಂಬ ಅಹಂ ದೂರವಾಗಲು ಭಜನೆ ಪ್ರೇರಣೆ. ದರ್ಮಸ್ಥಳ ಭಜನಾ ಕಮ್ಮಟದ ಮೂಲಕ ಭಜನೆಗೆ ಹೊಸ ರೂಪ ಬಂದಿದ್ದು ಇದಕ್ಕೆ ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಾರಣ. ಇಂದು ಗ್ರಾಮ ಗ್ರಾಮಗಳಲ್ಲಿ ಭಜನಾ ಮಂಡಳಿ ಮೂಲಕ ನಾಯಕತ್ವ ಬೆಳೆಸುವ ಕಾರ್ಯವಾಗುತ್ತಿದೆ ಎಂದರು.  

ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಭಜನಾ ಪರಿಷತ್ ನ ರಾಜ್ಯಾದ್ಯಕ್ಷ ಚಂದ್ರಶೇಖರ ಸಾಲಿಯಾನ್, ತಾ ಪಂ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಪತ್ರಕರ್ತ ಮನೋಹರ್ ಬಳಂಜ, ಭಜನಾ ಪರಿಷತ್ ಗುರುವಾಯನಕೆರೆ ವಲಯಾಧ್ಯಕ್ಷ ಜಗದೀಶ್ ಮೈರ, ಜಯರಾಜ್ ನಡಕ್ಕರ, ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ನಾಗೇಶ್, ತಾಲೂಕಿನ ವಿವದ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

- Advertisement -

Latest News

error: Content is protected !!