Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು; ಎಸ್.ಡಿ.ಎಂ ನಲ್ಲಿ ಅಂತಾರಾಷ್ಟೀಯ ವಿಚಾರಸಂಕಿರಣ

ಬೆಳ್ತಂಗಡಿ : ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು; ಎಸ್.ಡಿ.ಎಂ ನಲ್ಲಿ ಅಂತಾರಾಷ್ಟೀಯ ವಿಚಾರಸಂಕಿರಣ

- Advertisement -
- Advertisement -

ಬೆಳ್ತಂಗಡಿ : ಸರ್ಕಾರವು ಆಧುನಿಕ ಸಂಶೋಧನೆಗಳಿಗೆ ಹೆಚ್ಚಿನ ನೆರವು ಮತ್ತು ಪ್ರೋತ್ಸಾಹ ನೀಡುತ್ತಿದ್ದು, ಯುವಜನತೆ ಇದರ ಸದುಪಯೋಗ ಪಡೆದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು ಎಂದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಕ್ಲಸ್ಟರ್ ಮುಖ್ಯಸ್ಥ ಧಾರವಾಡದ ವೆಂಕಟೇಶ ದೇಶಪಾಂಡೆ ಹೇಳಿದರು.

ಉಜಿರೆ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಎರಡು ದಿನಗಳಲ್ಲಿ ಆಯೋಜಿಸಿದ ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು ಎಂಬ ಅಂತಾರಾಷ್ಟೀಯ ವಿಚಾರ ಸಂಕಿರಣವನ್ನು ನ.28 ರಂದು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನವಾದ ವೆಬ್‌ಸೈಟ್ ಹಾಗೂ ಲ್ಯಾಪ್‌ಟಾಪ್, ಆನ್‌ಲೈನ್ ಮೂಲಕ ಸಂಶೋಧನೆಯ ಪ್ರಸ್ತಾವನೆ ಮತ್ತು ಉದ್ದೇಶವನ್ನು ಸಾದರಪಡಿಸಿದಾಗ ಸರ್ಕಾರ ತಕ್ಷಣ ಐವತ್ತು ಲಕ್ಷ ರೂ. ಅನುದಾನ ಮಂಜೂರು ಮಾಡುತ್ತದೆ. ಮೌಲ್ಯಮಾಪನ ಕೂಡಾ ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಯುವಜನತೆ ಇದರ ಸದುಪಯೋಗ ಪಡೆದು ಹೆಚ್ಚಿನ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐ.ಟಿ. ವಿಭಾಗದ ಸಿ.ಇ.ಒ. ಪೂರನ್‌ವರ್ಮ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಪರಿವರ್ತನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ. ಜಿ.ಪಿ.ಟಿ., ಕೃತಕ ಬುದ್ಧಿಮತ್ತೆ ಮೊದಲಾದ ಸ್ಮಾರ್ಟ್ ಪದ್ಧತಿಗಳಿಂದ ಎಲ್ಲಾ ಆಟೊಮೇಟಿಕ್ ಆಗಿ ಆಗುವುದರಿಂದ ಸಮಯ ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಸಂಶೋಧನೆಗಳನ್ನು ಮಾಡಬೇಕು.

ಉತ್ತಮ ಸಂವಹನ ಕೌಶಲ ಮತ್ತು ಚಿಂತನಾಲಹರಿಯೊಂದಿಗೆ ಮೂಲಭೂತ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಂಕೀರ್ಣ ಸಮಸ್ಯೆಗಳನ್ನು ಸರಳ ಭಾಗಗಳಾಗಿ ವಿಂಗಡಿಸಿ ಎಲ್ಲಾ ವಿಭಾಗಗಳಲ್ಲಿಯೂ ಪರಿಣತಿ ಹೊಂದಿ ಕ್ಷಿಪ್ರ ಬದಲಾವಣೆಗಳನ್ನು ಸ್ವೀಕರಿಸಲು ಮುಕ್ತವಾದ ಮನಸ್ಸು ಹೊಂದಿರಬೇಕು ಎಂದು ಪೂರನ್‌ ವರ್ಮ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಮಾತನಾಡಿ, ಏನೇ ಆದರೂ ಮೊದಲು ಮಾನವನಾಗು ಎಂಬಂತೆ ಮಾನವ ಜನಾಂಗದ ಕಲ್ಯಾಣವೇ ಸಂಶೋಧನೆಗಳ ಗುರಿಯಾಗಬೇಕು. ಡಿಜಿಟಲ್ ಮಾಧ್ಯಮ ಹಾಗೂ ಆಧುನಿಕ ಸಮಶೋಧನೆಗಳಿಂದ ನೈತಿಕತೆ ಹಾಗೂ ಸೌಹಾರ್ದಯುತ ಮಾನವೀಯ ಸಂಬಂಧಗಳು ಕಡಿತಗೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಡಾ. ಅಶ್ವಿನಿ ಹೊಳ್ಳ ಉಪಸ್ಥಿತರಿದ್ದರು.ಒಟ್ಟು ೧೬೮೦ ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ ೧೬೦ ಸಂಶೋಧಕರ ಲೇಖನಗಳು ವಿಚಾರ ಸಂಕಿರಣದಲ್ಲಿ ಮಂಡನೆಯಾಗಲಿವೆ.

ಅಂತಾರಾಷ್ಟೀಯ ವಿಚಾರ ಸಂಕಿರಣದ ಸಂಯೋಜಕ ಡಾ. ಬಸವ ಟಿ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಪ್ರತಾಪಚಂದ್ರ ಧನ್ಯವಾದವಿತ್ತರು. ಡಾ. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು

- Advertisement -

Latest News

error: Content is protected !!