Sunday, June 7, 2026
Homeಕರಾವಳಿಮಂಗಳೂರುಸುಬ್ರಹ್ಮಣ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಚಿಕಿತ್ಸೆ ಫಲಿಸದೇ ಸಾವು

ಸುಬ್ರಹ್ಮಣ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ಸುಬ್ರಹ್ಮಣ್ಯ:  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕಲ್ಮಕಾರು ಎಂಬಲ್ಲಿ ನಡೆದಿದೆ. ಕಲ್ಮಕಾರು ಗ್ರಾಮದ ಪೆರ್ಮುಕಜೆ  ನಿವಾಸಿ ನಾರಾಯಣ ಪಿ(85) ಮೃತಪಟ್ಟವರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ   ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  ಆದರೂ ಸರಿಯಾಗಿ ಗುಣವಾಗದೇ ಇರುವುದರಿಂದ ಯಾವಾಗಲೂ ಬೇಸರದಿಂದ  ಇರುತ್ತಿದ್ದು, ನನಗೆ ನೋವಾಗುತ್ತಿದೆ ನಾನು ಏನಾದರೂ ಮಾಡಿ ಸಾಯುತ್ತೇನೆಂದು ಹೇಳುತ್ತಿದ್ದರು ಎಂದು ಹೇಳಲಾಗಿದೆ. ನ.20 ರಂದು ಬೆಳಿಗ್ಗೆ   ಮನೆಯ ಸಿಟೌಟ್ ನಲ್ಲಿರುವ ಹುಕ್ಸಿಗೆ ಕರೆಂಟ್ ವಯರಿಂಗ್ ಮಾಡುವ ವಯರ್ ನಲ್ಲಿ ಅವರ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಮಗಳು ಮತ್ತು ನೆರೆಮನೆಯವರು  ಚಿಕಿತ್ಸೆಗೆಗಾಗಿ  ಬಗ್ಗೆ ಸುಳ್ಯದ ಖಾಸಗಿ   ಆಸ್ಪತ್ರೆಗೆ ಕರೆದುಕೊಂಡು ಹೋಗಿ   ತೀವ್ರ ನಿಗಾಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನ.22 ರಂದು  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶ್ರೀಮತಿ ಸುಮಲತಾ ಅವರು ನೀಡಿದ ದೂರಿನಂತೆ  ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!