Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ: ಮಾರುವೇಷದಲ್ಲಿ ಬಂದು ಪತ್ನಿಯಿಂದ ಗಂಡನಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ

ಬಂಟ್ವಾಳ: ಮಾರುವೇಷದಲ್ಲಿ ಬಂದು ಪತ್ನಿಯಿಂದ ಗಂಡನಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -

ಬಂಟ್ವಾಳ: ಟೆಕ್ಸ್ ಟೈಲ್ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಕೃಷ್ಣ ಕುಮಾರ್ ಸೋಮಯಾಜಿ ಅವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದ ಮಹಿಳೆಯಾಗಿದ್ದಾರೆ.

ಬಿಸಿರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ನುಗ್ಗಿದ ಅವರು ಕ್ಯಾಸ್ ಕೌಂಟರ್ ನಲ್ಲಿ ಕುಳಿತ್ತಿದ್ದ ಗಂಡನಿಗೆ ಬುರ್ಖಾ ದರಿಸಿಕೊಂಡು ಬಂದ ಪತ್ನಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡ ಕೃಷ್ಣ ಸೋಮಯಾಜಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಆರೋಪಿತೆ ಜ್ಯೋತಿ ಸೋಮಯಾಜಿ ಅವರನ್ಬು ಬಂಟ್ವಾಳ ಪೋಲೀಸರು ಕ್ಷಣಾರ್ಧದಲ್ಲಿ ಬಂಧಿಸಿದ್ದಾರೆ.  ಬಂಟ್ವಾಳ ನಗರ ಪೋಲೀಸರು ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇತ್ತೀಚೆಗೆ ಕೌಟುಂಬಿಕ ಕಲಹದ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಕೌಟುಂಬಿಕ ವಿಚಾರಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದರು ಎನ್ನಲಾಗಿದೆ

- Advertisement -

Latest News

error: Content is protected !!