- Advertisement -
![]()
- Advertisement -
ಪುತ್ತೂರು: ಶಾಲೆಗೆ ಹೋಗುತ್ತಿದ್ದ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ; ರಿಕ್ಷಾ ಚಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ರಿಕ್ಷಾ ಚಾಲಕ ಪ್ರಸಾದ್ ಎಂಬಾತನ ವಿರುದ್ಧ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯರಿಬ್ಬರು ಕೆಲವು ದಿನಗಳ ಹಿಂದೆ ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದ. ನ.8ರಂದು ಬೆಳಿಗ್ಗೆ ಬಾಲಕಿಯರು ಶಾಲೆಗೆ ಹೋಗುತ್ತಿದ್ದಾಗ,ಅದೇ ಅಪರಿಚಿತ ವ್ಯಕ್ತಿಯು ಆಟೊ ರಿಕ್ಷಾದಲ್ಲಿ ಬಂದು ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.
- Advertisement -


