Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಉದ್ಯಮಿಗಳಿಗೆ ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ: ವಂಚಕ ರೋಶನ್ ಸಲ್ಡಾನ್ಹಾನ...

ಮಂಗಳೂರು; ಉದ್ಯಮಿಗಳಿಗೆ ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ: ವಂಚಕ ರೋಶನ್ ಸಲ್ಡಾನ್ಹಾನ ಮನೆ ಹಾಗೂ ಬ್ಯಾಂಕ್ ಖಾತೆ ಜಪ್ತಿ ಮಾಡಿದ ಇಡಿ

- Advertisement -
- Advertisement -

ಮಂಗಳೂರು; ಉದ್ಯಮಿಗಳಿಗೆ ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಂಚಕ ರೋಶನ್ ಸಲ್ಡಾನ್ಹಾನ ಮನೆ ಹಾಗೂ ಬ್ಯಾಂಕ್ ಖಾತೆಯನ್ನು ಇಡಿ ಜಪ್ತಿ ಮಾಡಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) 2002ರ ಅಡಿಯಲ್ಲಿ ರೋಶನ್ ಸಲ್ಡಾನ್ಹಾನ ಸುಮಾರು 2.85 ಕೋಟಿ ರೂ. ಮೌಲ್ಯದ ವಾಸದ ಮನೆ ಹಾಗೂ ಬ್ಯಾಂಕ್ ಖಾತೆ ರೂಪದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ)ದ ಮಂಗಳೂರು ಉಪ ವಲಯ ಕಚೇರಿ ಜಪ್ತಿ ಮಾಡಿದೆ.

ರೋಶನ್ ಸಲ್ಡಾನ್ಹಾ, ಆತನ ಪತ್ನಿ ಡಾಫ್ನಿ ನೀತು ಡಿ’ಸೋಜಾ ಮತ್ತು ಇತರರ ವಿರುದ್ಧ ದಾಖಲಾಗಿರುವ ಅನೇಕ ಎಫ್ಐಆರ್‌ಗಳ ಆಧಾರದ ಮೇಲೆ ಇಡಿ ಈ ತನಿಖೆಯನ್ನು ಪ್ರಾರಂಭಿಸಿತ್ತು. ಆರೋಪಿಗಳು ರಾಜ್ಯ, ಹೊರರಾಜ್ಯಗಳ ವಿವಿಧ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವ್ಯವಸ್ಥೆ ಮಾಡಿಕೊಡುವ ನೆಪದಲ್ಲಿ, ಸ್ಟ್ಯಾಂಪ್ ಡ್ಯೂಟಿ ಹೆಸರಿನಲ್ಲಿ ಹಣ ಸಂಗ್ರಹಿಸಿ, ಬಳಿಕ ಸಾಲ ನೀಡದೆ ವಂಚಿಸಿದ್ದಾರೆ ಎಂದು ಎಫ್ಐಆರ್ ಗಳಲ್ಲಿ ಉಲ್ಲೇಖವಾಗಿದೆ.

ಕಳೆದ ಆಗಸ್ಟ್‌ನಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17 ಅಡಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ಹಾಗೂ ಅನಂತರದ ವಿಚಾರಣೆಗಳಲ್ಲಿ ಆರೋಪಿಗಳಾದ ರೋಶನ್ ಸಲ್ಡಾನ್ಹಾ, ಡಾಫ್ನಿ ನೀತು ಡಿ’ಸೋಜಾ ಮತ್ತು ಇತರರು 2024ರ ಅಕ್ಟೋಬರ್‌ನಿಂದ 2025ರ ಜುಲೈ ವರೆಗೆ, ಹೊಸ ಬೇನಾಮಿ ಸಂಸ್ಥೆಗಳ ಮೂಲಕ ಸುಮಾರು 49 ಕೋಟಿ ರೂ. ಮೊತ್ತವನ್ನು ಸ್ಟ್ಯಾಂಪ್ ಡ್ಯೂಟಿ ಹೆಸರಿನಲ್ಲಿಉದ್ಯಮಿಗಳಿಂದ ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ, ಸ್ವಂತ ವ್ಯವಹಾರಗಳಿಗಾಗಿ ಉಪಯೋಗಿಸಿದ್ದು, ಒಂದಷ್ಟು ಮೊತ್ತವನ್ನು ಬೇನಾಮಿ ಸಂಸ್ಥೆಗಳ ಮೂಲಕ ಹೊರಗೆ ವರ್ಗಾಯಿಸಿರುವುದೂ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಪ್ರೊಸೀಡ್ಸ್ ಆಫ್ ಕ್ರೈಂ (ಪಿಒಸಿ) ರೂಪದಲ್ಲಿ ಸುಮಾರು 9.5 ಕೋಟಿ ರೂ. ಮೊತ್ತದ ಬೋಟುಗಳು ಮತ್ತು ಎಂಜಿನ್‌ಗಳನ್ನು ಇಡಿ ಈಗಾಗಲೇ ವಶಪಡಿಸಿಕೊಂಡಿದೆ ಮತ್ತು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ. ಮಾತ್ರವಲ್ಲದೆ ಪ್ರಧಾನ ಆರೋಪಿ ರೋಶನ್ ಸಲ್ಡಾನ್ಹಾನ 2.14 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ 70.8 ಲಕ್ಷ ರೂ. ಮೌಲ್ಯದ ಪಿಒಸಿ ಹೊಂದಿರುವ ಎಂಎಸ್‌ಪಿಎಂ ಎಂಟರ್ ಪ್ರೈಸಸ್ ಸಂಸ್ಥೆಯ ಬ್ಯಾಂಕ್ ಖಾತೆಯನ್ನೂ ಜಪ್ತಿ ಮಾಡಲಾಗಿದೆ.

- Advertisement -

Latest News

error: Content is protected !!