Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಎಸ್.ಐ.ಟಿ ಯ ಸೂಪರ್ ಕಾಪ್ ಮಂಜುನಾಥ್ ಗೌಡ ಲೋಕಾಯುಕ್ತ  ಡಿವೈಎಸ್ಪಿಯಾಗಿ ನೇಮಕ

ಬೆಳ್ತಂಗಡಿ :ಎಸ್.ಐ.ಟಿ ಯ ಸೂಪರ್ ಕಾಪ್ ಮಂಜುನಾಥ್ ಗೌಡ ಲೋಕಾಯುಕ್ತ  ಡಿವೈಎಸ್ಪಿಯಾಗಿ ನೇಮಕ

- Advertisement -
- Advertisement -

ಬೆಳ್ತಂಗಡಿ : ಎಸ್.ಐ.ಟಿ ತಂಡದಲ್ಲಿ ಸೂಪರ್ ಕಾಪ್ ಎಂದು ಹೆಸರು ಪಡೆದು ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನಿಂದ ಸತ್ಯ ಕಕ್ಕಿಸಿ ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಇವರಿಗೆ ಸರಕಾರ ಡಿವೈಎಸ್ಪಿ ಆಗಿ ಪದೋನ್ನತಿ ನೀಡಿತ್ತು. ಇದೀಗ ಲೋಕಾಯುಕ್ತ ಇಲಾಖೆಗೆ ಡಿವೈಎಸ್ಪಿಯಾಗಿ ನೇಮಕ ಮಾಡಿದೆ.ಆದ್ರೆ ಧರ್ಮಸ್ಥಳ ಪ್ರಕರಣ ಮುಗಿಯುವವರೆಗೆ ಎಸ್.ಐ.ಟಿ ಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಮೂಲತಃ ಮಂಡ್ಯ ಜಿಲ್ಲೆಯ ನಿವಾಸಿ ಮಂಜುನಾಥ್ ಗೌಡ ಇವರನ್ನು ಸರಕಾರ ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ಗೆ ನೇಮಕ ಮಾಡಿದ್ದರು. ಅ.13 ರಂದು ಸರಕಾರ ಡಿವೈಎಸ್ಪಿ ಹುದ್ದೆಗೆ ಪದೋನ್ನತಿ ನೀಡಿತ್ತು.‌ಎಸ್.ಐ.ಟಿ ಪ್ರಕರಣ ಮುಕ್ತಾಯವಾದ ಬಳಿಕ ಲೋಕಾಯುಕ್ತ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲಿಗರು ಸುಳ್ಳು ಆರೋಪಗಳನ್ನು ಎದುರು ಹಾಕಿಕೊಂಡರೂ ಕೂಡ ಕ್ಯಾರೆ ಮಾಡದೆ ಚಿನ್ನಯ್ಯನಿಂದ ಸತ್ಯ ಹೊರಗಡೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

- Advertisement -

Latest News

error: Content is protected !!