ಉಜಿರೆ: ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ಲಯನ್ ಎಂ. ಜಿ. ಶೆಟ್ಟಿ (ಎಂ. ಗೋಪಾಲ ಶೆಟ್ಟಿ) ಅವರು ತಮ್ಮ 86ನೇ ವಯಸ್ಸಿನಲ್ಲಿ ಅ. 29ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಬೆಳ್ತಂಗಡಿ ತಾಲೂಕಿನ ಅನುಗ್ರಹ ನಿವಾಸಿಯಾಗಿದ್ದು ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ಮಾತ್ರವಲ್ಲದೇ ವಿಜಯ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ, ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ, ಓಡಲ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾಗಿಯೂ ತಮ್ಮ ಸೇವೆಯನ್ನ ಸಲ್ಲಿಸಿದ್ದಾರೆ.
ಮೃತ ಎಂ. ಜಿ. ಶೆಟ್ಟಿಯವರು ಪತ್ನಿ ರುಕ್ಷ್ಮಿಣಿ ಜಿ. ಶೆಟ್ಟಿ, ಮಕ್ಕಳಾದ ಚಿತ್ರೀಶ್ ಶೆಟ್ಟಿ, ವೃಂದ ಹರಿಪ್ರಕಾಶ್ ಶೆಟ್ಟಿ ಮತ್ತು ಪ್ರಿಯಾ ಜೆ. ಅಡ್ಯಂತಾಯ ಅವರನ್ನು ಅಗಲಿದ್ದಾರೆ.
ಅ. 30ರಂದು ಬೆಳಿಗ್ಗೆ 10ಗಂಟೆಗೆ ಮೃತರ ಅಂತ್ಯ ಸಂಸ್ಕಾರ ಉಜಿರೆಯ ಅವರ ಸ್ವಗೃಹದಲ್ಲಿ ನಡೆಯಲಿದೆ.


