Thursday, June 4, 2026
Homeತಾಜಾ ಸುದ್ದಿಮಂಗಳವಾರದಿಂದಲೇ ರಾಜ್ಯದ ಪೊಲೀಸರ ತಲೆಗೆ ಪೀಕ್ ಕ್ಯಾಪ್

ಮಂಗಳವಾರದಿಂದಲೇ ರಾಜ್ಯದ ಪೊಲೀಸರ ತಲೆಗೆ ಪೀಕ್ ಕ್ಯಾಪ್

- Advertisement -
- Advertisement -

ಬೆಂಗಳೂರು: ಇಷ್ಟು ದಿನಗಳ ರಾಜ್ಯದ ಪೊಲೀಸ್ ಕಾನ್ ಸ್ಟೇಬಲ್ ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳು ಧರಿಸುತ್ತಿದ್ದ ಸ್ಟೋಚ್ ಹ್ಯಾಟ್ ಗೆ ಪುಲ್ ಸ್ಟಾಪ್ ಬೀಳಲಿದೆ.

ಅಕ್ಟೋಬರ್ 28ರಿಂದಲೇ ಸ್ಟೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ಗಳು ಪೊಲೀಸರ ತಲೆಗೆ ಏರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಂಗಳವಾರ ಪೀಕ್ ಕ್ಯಾಪ್ ಗಳನ್ನು ಪೊಲೀಸರಿಗೆ ವಿತರಣೆ ಮಾಡಲಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಪೀಕ್ ಕ್ಯಾಪ್ ವಿತರಣೆಗೆ ಚಾಲನೆ ದೊರೆಯಲಿದ್ದು, ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಹಂತ ಹಂತವಾಗಿ ಹೊಸ ಕ್ಯಾಪ್ ವಿತರಣೆಯಾಗಲಿದೆ.

ಜೂನ್‌ ತಿಂಗಳಿನಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತೆಲಂಗಾಣ ಪೊಲೀಸ್ ಮಾದರಿಯಲ್ಲಿ ಪೀಕ್ ಕ್ಯಾಪ್ ಜಾರಿಗೊಳಿಸುವ ಬಗ್ಗೆ ಗೃಹ ಇಲಾಖೆ ತೀರ್ಮಾನ ತೆಗೆದುಕೊಂಡಿತ್ತು.

- Advertisement -

Latest News

error: Content is protected !!