- Advertisement -
![]()
- Advertisement -
ಮಂಗಳೂರು: ಫಳ್ನೀರ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ನಡೆದಿದೆ.
ಪ್ರದೀಪ್ ಆಚಾರ್ಯ ಅವರ ಬೈಕ್ ಕಾಣೆಯಾಗಿದ್ದು, ಈ ಬಗ್ಗೆ ಕದ್ರಿ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ
ಅವರು ಆಸ್ಪತ್ರೆಯ ಬಳಿಯಲ್ಲಿ ರಾತ್ರಿ 7.10ಕ್ಕೆ ಬೈಕನ್ನು ನಿಲ್ಲಿಸಿದ್ದು, ಆಸ್ಪತ್ರೆಗೆ ಚಿಕ್ಕಪ್ಪನನ್ನು ನೋಡಲು ಹೋಗಿದ್ದರು ಎನ್ನಲಾಗಿದೆ. 9 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಬೈಕಿನ ಮೌಲ್ಯ 45,000 ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
- Advertisement -


