- Advertisement -
![]()
- Advertisement -
ಮಂಗಳೂರು:ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣದಲ್ಲಿ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕಾವೂರಿನ ಮುನಿಯಾಂಡಿ ನಿವಾಸಿ ಧರ್ಮರಾಜ(60) ಬಂಧಿತ ಆರೋಪಿ. ಈತ 2018 ರಿಂದ ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯವು ಎಲ್.ಪಿ.ಸಿ ವಾರೆಂಟನ್ನು ಹೊರಡಿಸಿತ್ತು. ಅದರಂತೆ ಆರೋಪಿಯನ್ನು ಕಾವೂರು ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಹಾಸ್ ಸನೀಲ್, ಹೆಚ್.ಸಿ 1025 ಬಾಲಕೃಷ್ಣ ಮತ್ತು ಪಿ.ಸಿ 757 ಚಂದ್ರಶೇಖರಪ್ಪ ರವರು ಖಚಿತ ಮಾಹಿತಿಯ ಮೇರೆಗೆ ಆರೋಪಿಯನ್ನು ಈ ದಿನ ಮುಲ್ಕಿಯ ಪಕ್ಷಿಕರೆಯ ಕೆಂಬ್ರಾಳ್ ಎಂಬಲ್ಲಿಂದ ಅಕ್ಟೋಬರ್ 16 ರಂದು ಬಂಧಿಸಿ 1 ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ದಿನಾಂಕ: 29-10-2025 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ..
- Advertisement -


