ಬಂಟ್ವಾಳ; ಆಟೋದಲ್ಲಿ ಮಾದಕವಸ್ತು ಎಂ.ಡಿ.ಎಂ.ಎ ಸೇವಿಸಲು ಯತ್ನಿಸುತ್ತಿದ್ದಾತನನ್ನು ಪೊಲೀಸರು ಬಂಧಿಸಿರುವ ಘಟನೆ ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ದಿನಾಂಕ: 15-10-2025 ರಂದು ನಡೆದಿದೆ. ಮೊಹಮ್ಮದ್ ಇಮ್ತಿಯಾಜ್(40) ಬಂಧಿತ ಆರೋಪಿ.
ಪ್ರಕರಣದ ವಿವರ;
ದಿನಾಂಕ: 15-10-2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಯೊಂದಿಗೆ ಇದ್ದಾಗ ಒಂದು ಅಟೋದಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮೊಹಮ್ಮದ್ ಇಮ್ತಿಯಾಜ್ ಎಂಬಾತ ಸ್ಮಶಾನದ ಪಕ್ಕ ಅಟೋ ರಿಕ್ಷಾವನ್ನು ನಿಲ್ಲಿಸಿದ್ದು ಆತನನ್ನು ವಿಚಾರಿಸಿದಾಗ ಆತ ಹಿಂದೆ ಬಂಟ್ವಾಳ ನಗರ ಪೊಲೀಸು ಠಾಣೆಯಲ್ಲಿ ದಾಖಲಾದ ಅ.ಕ್ರ 50/2025 ರಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿ ಅನ್ನೋದು ಗೊತ್ತಾಗಿದೆ. ಆತನನ್ನು ವಿಚಾರಿಸಿದಾಗ ನನ್ನ ಜೊತೆಯಲ್ಲಿ ಎಂ.ಡಿ.ಎಂ.ಎ ಇದ್ದು, ತಾನು ಅದನ್ನು ಸೇವಿಸಲು ಇಲ್ಲಿ ಬಂದಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆತನ ಬಳಿ ಒಟ್ಟು 0.760 ಗ್ರಾಂ [760 ಮಿಲಿಗ್ರಾಂ] ಎಂ.ಡಿ.ಎಂ.ಎ ಪತ್ತೆಯಾಗಿದೆ. ಎಂ.ಡಿ.ಎಂ.ಎ ಮಾದಕ ಸ್ವತ್ತಿನ ಅಂದಾಜು ಮೌಲ್ಯ ರೂ. 1,000/- ಆಗಬಹುದು ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ :8 [c] 22(b) NDPS ACT 1985. ಯಂತೆ ಪ್ರಕರಣ ದಾಖಲಿಸಿಕೂಂಡು ಆತನನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


