Saturday, June 6, 2026
Homeಕರಾವಳಿಎಸ್.ಐ.ಟಿ ಯ ಸೂಪರ್ ಕಾಪ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಡಿವೈಎಸ್ಪಿಯಾಗಿ ಪದೋನ್ನತಿ

ಎಸ್.ಐ.ಟಿ ಯ ಸೂಪರ್ ಕಾಪ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಡಿವೈಎಸ್ಪಿಯಾಗಿ ಪದೋನ್ನತಿ

- Advertisement -
- Advertisement -

ಬೆಳ್ತಂಗಡಿ : ಎಸ್.ಐ.ಟಿ ತಂಡದಲ್ಲಿ ಸೂಪರ್ ಕಾಪ್ ಎಂದು ಹೆಸರು ಪಡೆದು ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನಿಂದ ಸತ್ಯ ಬಾಯಿಬಿಡಿಸಿ ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಇವರಿಗೆ ಸರಕಾರ ಡಿವೈಎಸ್ಪಿ ಆಗಿ ಪದೋನ್ನತಿ ನೀಡಿ ಆದೇಶ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಮೂಲತಃ ಮಂಡ್ಯ ಜಿಲ್ಲೆಯ ನಿವಾಸಿ ಮಂಜುನಾಥ್ ಗೌಡ ಇವರನ್ನು ಸರಕಾರ ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ಗೆ ನೇಮಕ ಮಾಡಲಾಗಿತ್ತು.

ಇದೀಗ ಅ.13 ರಂದು ಸರಕಾರ ಡಿವೈಎಸ್ಪಿ ಹುದ್ದೆಗೆ ಪದೋನ್ನತಿ ನೀಡಿ ಆದೇಶ ಮಾಡಿದೆ.ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹಲವಾರು ಸವಾಲುಗಳನ್ನು ಎದುರು ಹಾಕಿ ಚಿನ್ನಯ್ಯನಿಂದ ಸತ್ಯ ಹೊರಗಡೆ ಬರುವಂತೆ ಮಾಡಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ. ಚಿನ್ನಯ್ಯನಿಂದ ಸತ್ಯ ಹೊರಬರುತ್ತಿದ್ದಂತೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಮಂಜುನಾಥ್ ಗೌಡ ಯಾವುದಕ್ಕೂ ಜಗ್ಗದೆ ಕರ್ತವ್ಯ ನಿರ್ವಹಿಸಿ ಹೆಸರು ಪಡೆದ ಅಧಿಕಾರಿಯಾಗಿದ್ದಾರೆ.

- Advertisement -

Latest News

error: Content is protected !!