- Advertisement -
![]()
- Advertisement -
ಬೆಳ್ತಂಗಡಿ :ಉಜಿರೆ ಗ್ರಾಮದ ಅರಳಿ ಬಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಯಾರೋ ಕಳ್ಳರು ಕಳ್ಳತನ ಮಾಡಿ ನಗ -ನಗದು ದೋಚಿ ಪರಾರಿಯಾದ ಘಟನೆ ಅ.9ರಂದು ಸಂಜೆ ನಡೆದಿದೆ.
ಬೆಟ್ಟು ಮನೆಯ ಅರಳಿ ನಿವಾಸಿ ಮಹಾಬಲ ರವರು ಅ.9 ರಂದು ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದು ಈ ವೇಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆಯ ಪಕ್ಕಾಸು ತೆಗೆದು ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 1,0000 ನಗದು ಹಾಗೂ 50 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.9 ರಂದು ರಾತ್ರಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .
- Advertisement -


