ಕಾಸರಗೋಡು: ಡಿವೈಎಫ್ಐ ನಾಯಕಿ ಯುವ ವಕೀಲೆ ರಂಜಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರಂಜಿತಾ ಅವರ ಸ್ನೇಹಿತ ತಿರುವಲ್ಲ ಮೂಲದ ಅನಿಲ್ ಕುಮಾರ್ ಬಂಧಿತ. ಇಂದು ಬೆಳಿಗ್ಗೆ ತಿರುವನಂತಪುರಂನಲ್ಲಿ ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದೆ. ಬಂಧಿತ ಆರೋಪಿ ರಂಜಿತಾ ಅವರ ಸ್ನೇಹಿತ ಎನ್ನಲಾಗಿದೆ.
ಡಿವೈಎಫ್ಐ ಮುಖಂಡೆಯಾಗಿರುವ ವಕೀಲೆ ರಂಜಿತಾ ಸೆಪ್ಟೆಂಬರ್ 30 ರಂದು ಕುಂಬಳೆಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು, ರಂಜಿತ್ ಸಿಪಿಐ(ಎಂ) ಕುಂಬಳ ಸ್ಥಳೀಯ ಸಮಿತಿಯ ಸದಸ್ಯೆ, ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಗ್ರಾಮ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಪ್ರಾದೇಶಿಕ ಅಧ್ಯಕ್ಷೆಯಾಗಿದ್ದರು. ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಪ್ರಕರಣ ತನಿಖೆ ಮುಂದುವರೆಸಿದ ಪೊಲೀಸರು ರಂಜಿತಾ ಬಳಸುತ್ತಿದ್ದ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆದಿದ್ದರು.
ಪೊಲೀಸರು ವಿವರವಾದ ತನಿಖೆಯನ್ನು ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡವು ರಂಜಿತಾ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಹೇಳಿಕೆಗಳನ್ನು ಸಂಗ್ರಹಿಸುತ್ತಿದೆ.


