ಬಿಗ್ಬಾಸ್ ಕನ್ನಡ ಸೀಸನ್ 12ರ ಕರಾವಳಿಯ ಕಂಟೆಸ್ಟೆಂಟ್ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಪ್ರೋಮೊದಲ್ಲಿ ರಕ್ಷಿತಾ ಶೆಟ್ಟಿ ಅವರು ಬಿಗ್ಬಾಸ್ಗೆ ಮರಳಿರುವ ದೃಶ್ಯಗಳಿದ್ದು, ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮತ್ತೆ ಬಿಗ್ಬಾಸ್ಗೆ ಸ್ವಾಗತಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಅವರು ರಕ್ಷಿತಾ ಶೆಟ್ಟಿಗೆ ಯಾಕೆ ಹಠಾತ್ತನೆ ಹೊರಗೆ ಕಳಿಸಿಬಿಟ್ಟರಲ್ಲ ಎಂಬ ಪ್ರಶ್ನೆ ಕೇಳಿದ್ದು, ಆಕೆ ಉತ್ತರಿಸಿ, ಹೌದು ಸರ್, ಎಲ್ಲರೂ ಸೇರಿ ಹೊರಗೆ ಹಾಕಿಬಿಟ್ಟರು. ನಾನು ಹೋಗುವಾಗ ಎಲ್ಲರೂ ಬಂದು ಸಮಾಧಾನ ಮಾಡಿದರು ಆದರೆ ಯಾರೂ ಸಹ ನನ್ನ ಪರವಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಈಗ ಒಳಗೆ ಹೋಗಿ ಕೇಳುತ್ತೀನಿ, ಯಾಕೆ ಹಾಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ, ನನ್ನ ಆಟ ನೋಡದೇ ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ ಎಂದು ಕೇಳುತ್ತೀನಿ, ಚೆನ್ನಾಗಿ ಆಡುತ್ತೀನಿ’ ಎಂದಿದ್ದಾರೆ.
ಬಿಗ್ ಬಾಸ್ ಶೋ ಶುರುವಾಗಿ 24 ಗಂಟೆಗಳಲ್ಲೇ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಿಬಿಟ್ಟರು. ಉಡುಪಿಯ ರಕ್ಷಿತಾ ಶೆಟ್ಟಿ ಅವರನ್ನು ಏಕಾ ಏಕಿ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಕನ್ನಡ ಬಿಗ್ಬಾಸ್ ಇತಿಹಾಸದಲ್ಲಿಯೇ ಇಷ್ಟು ತ್ವರಿತವಾಗಿ ಯಾರೂ ಎಲಿಮಿನೇಟ್ ಆಗಿರಲಿಲ್ಲ. ರಕ್ಷಿತಾರ ಆಟವನ್ನು ನೋಡದೆ ಅವರನ್ನು ಹೊರಗೆ ಕಳಿಸಿದರ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಬಿಗ್ಬಾಸ್ ಅನ್ನು ಟೀಕೆ ಸಹ ಮಾಡಲಾಗಿತ್ತು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಬಿಗ್ಬಾಸ್ ಇದೀಗ ರಕ್ಷಿತಾ ಶೆಟ್ಟಿಯವರನ್ನು ಮರಳಿ ಮನೆಗೆ ಕರೆತಂದಿದ್ದಾರೆ.


