Wednesday, June 24, 2026
Homeತಾಜಾ ಸುದ್ದಿರೈಲ್ವೆ ಇಲಾಖೆಯಿಂದ ಮೈಸೂರು ದಸರಾಗೆ ಆಗಮಿಸುವ ನಾಡ ಜನತೆಗೆ ಬಿಗ್ ಗಿಫ್ಟ್

ರೈಲ್ವೆ ಇಲಾಖೆಯಿಂದ ಮೈಸೂರು ದಸರಾಗೆ ಆಗಮಿಸುವ ನಾಡ ಜನತೆಗೆ ಬಿಗ್ ಗಿಫ್ಟ್

- Advertisement -
- Advertisement -

ಮೈಸೂರು: ರೈಲ್ವೆ ಇಲಾಖೆಯಿಂದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾಗೆ ಆಗಮಿಸುವ ನಾಡ ಜನತಗೆ ಬಿಗ್‌ ಗಿಫ್ಟ್‌ ನೀಡಲಾಗಿದೆ. 

ಈ ಬಾರಿ ಮೈಸೂರಿಗೆ ಬರುವವರಿಗೆ 51 ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಎಂದಿನಂತೆ ಸಂಚರಿಸುವ ರೈಲುಗಳಿಗಿಂತ 51 ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೆ ಇಲಾಖೆ 11 ಅನ್ ರಿಸರ್ವ್ಡ್ ಟ್ರೈನ್‌ಗಳ ವ್ಯವಸ್ಥೆ ಮಾಡಿದ್ದು, ಜನಸಂದಣಿಯ ಅವಶ್ಯಕತೆಗೆ ತಕ್ಕಂತೆ ಬೋಗಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. 

ವಿಜಯಪುರ, ಶಿವಮೊಗ್ಗ, ಧಾರವಾಡ, ಚಾಮರಾಜನಗರ ಹಾಗೂ ತಮಿಳುನಾಡು, ಮಡಗಾಂವ್, ರಾಮನಾಥಪುರಂದಿಂದ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ದರ ಹಾಗೂ ಸಮಯವನ್ನು ಪ್ರತಿ ರೈಲ್ವೆ ನಿಲ್ದಾಣದಲ್ಲಿ ಹಾಕಲಾಗಿರುತ್ತದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಸಮಸ್ಯೆಯಾದ್ರೆ ಪ್ಲಾಟ್ ಫಾಮ್ 1ರಲ್ಲಿ  ಪ್ರತ್ಯೇಕ ಕ್ಲಿನಿಕ್ ವ್ಯವಸ್ಥೆ ಕಲ್ಪಿಸಲಾಗಿದೆ. 

ರೈಲ್ವೆ ನಿಲ್ದಾಣದಲ್ಲಿ 150 ಜಿ.ಆರ್.ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 50 ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಈ ಕುರಿತು ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!