Wednesday, June 3, 2026
Homeಕರಾವಳಿಮಂಗಳೂರುಪುತ್ತೂರು: ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋ ಪೋಸ್ಟ್: ದೂರು ದಾಖಲು

ಪುತ್ತೂರು: ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋ ಪೋಸ್ಟ್: ದೂರು ದಾಖಲು

- Advertisement -
- Advertisement -

ಪುತ್ತೂರು: ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋ ಪೋಸ್ಟ್ ಮಾಡಿದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ: 15-09-2025 ರಂದು ಬೆಳಗ್ಗೆ ಪ್ರಕರಣದ ದೂರುದಾರ ಪುತ್ತೂರು ಕಸಬಾ ಗ್ರಾಮ ನಿವಾಸಿ ಶಿವಕುಮಾರ್ ಪಿ.ಬಿ (54) ರವರು ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ್ನು ವೀಕ್ಷಿಸುತ್ತಿದ್ದಾಗ, ಆರೋಪಿ ನವೀನ್ ರೈ ಕೈಕಾರ ಎಂಬಾತನು, ಆತನ ಪೇಸ್ಬುಕ್ ಪೇಜ್‌ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋವನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ‌ಶಿವಕುಮಾರ್ ನೀಡಿದ ದೂರಿನ ಮೇರೆಗೆ ಅ.ಕ್ರ ನಂಬರ್ : 81/2025, ಕಲಂ: 296 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!