ಪುತ್ತೂರು: ನಿವೇಶನದ ಹೆಸರಿನಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಡೂರು ಗ್ರಾಮದ ಕೆರೆಮನೆ ನಿವಾಸಿ ಭರತ್ ಕುಮಾರ್ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಭರತ್ ಕುಮಾರ್ ಬೆಂಗಳೂರಿನ ಸತೀಶ್ ಸೋನಿ ಎಂಬವರಿಗೆ ನಿವೇಶನ ತೋರಿಸಿ ವಂಚಿಸಿದ್ದ. ಇದರ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ್ದು ಅಲ್ಲಿ ಆರೋಪಿಗೆ ಹಣ ಪಾವತಿಸುವಂತೆ ವಾರೆಂಟ್ ಹೊರಡಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಮತ್ತು ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಶಾಂತಿನಗರ ಹೊರಡಿಸಿದ ವಾರೆಂಟ್ ಪ್ರಕರಣದಲ್ಲಿ ಭರತ್ ಕುಮಾರ್‌ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ರವಿ ಬಿ. ಎಸ್., ಉಪ ನಿರೀಕ್ಷಕ ಜಂಬೂರಾಜ್ ಬಿ. ಮಹಾಜನ್ ಮತ್ತು ಸುಷ್ಮಾ ಜಿ ಭಂಡಾರಿ ಅವರ ನಿರ್ದೇಶನದಲ್ಲಿ ಠಾಣಾ ಸಿಬ್ಬಂದಿ ಪ್ರವೀಣ್ ರೈ, ಹರೀಶ್, ಚೋಳಪ್ಪ ಸಂಶಿ ಅವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದೆ.


