Wednesday, June 24, 2026
Homeಕರಾವಳಿಮಂಗಳೂರುಸುಳ್ಯ: ಕೇರಳದ ಕೊಲೆ ಪ್ರಕರಣವೊಂದರ ಆರೋಪಿಗಳು ಕಲ್ಲುಗುಂಡಿಯಲ್ಲಿ ಸಿನಿಮೀಯ ರೀತಿಯಲ್ಲಿ ಪರಾರಿ

ಸುಳ್ಯ: ಕೇರಳದ ಕೊಲೆ ಪ್ರಕರಣವೊಂದರ ಆರೋಪಿಗಳು ಕಲ್ಲುಗುಂಡಿಯಲ್ಲಿ ಸಿನಿಮೀಯ ರೀತಿಯಲ್ಲಿ ಪರಾರಿ

- Advertisement -
- Advertisement -

ಸುಳ್ಯ: ಕೇರಳದ ಕೊಲೆ ಪ್ರಕರಣವೊಂದರ ಆರೋಪಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಕಲ್ಲುಗುಂಡಿಯಲ್ಲಿ ನಡೆದಿದೆ.

ಕೇರಳ ಪಾಲಕ್ಕಾಡ್ ನಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಗಳನ್ನು ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಆರೋಪಿಗಳು ತಮ್ಮ ಥಾರ್ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಪ್ರಯಾಣಿಸುವ ಮಾಹಿತಿ ತಿಳಿದ ಕೇರಳ ಪೊಲೀಸರು ಅವರನ್ನು ಹಿಡಿಯವುದಕ್ಕಾಗಿ ಕಲ್ಲುಗುಂಡಿ ಹೊರ ಠಾಣಾ ಬಳಿ ಕಾದು ಕುಳಿತಿದ್ದರು . ಆದರೆ ಪೊಲೀಸರು ಇರುವ ವಿಷಯ ತಿಳಿದ ಆರೋಪಿಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿಯಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ವೇಗವಾಗಿ ಹೋಗಿದ್ದು ಈ ವಿವರ ತಿಳಿದ ಸಾರ್ವಜನಿಕರು ದೇವರಕೊಲ್ಲಿ ಬಳಿ ಸೇತುವೆಯಲ್ಲಿ ಸೇರಿದ್ದರು . ಇದನ್ನು ಕೂಡ ಅರಿತ ಆರೋಪಿಗಳು ದೇವರ ಕೊಲ್ಲಿ ಬಳಿ ಕಾರನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!