- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ನ್ಯಾಯಾಧೀಶರ ಮುಂದೆ ರೂವಾರಿಗಳ ಬಗ್ಗೆ ಬಂಟ್ವಾಳದ ಪ್ರದೀಪ್ ಮಹತ್ವದ ಸಾಕ್ಷಿ ಹೇಳಿಕೆ ನೀಡಿದ್ದಾರೆ.
ಬೆಳ್ತಂಗಡಿ ನ್ಯಾಯಾಲಯದಲ್ಲಿ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರಾದ ಸಂದೇಶ್ ಅವರ ಮುಂದೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.12 ರಂದು ಸಂಜೆ 3:30 ರಿಂದ 5:30 ರ ವರಗೆ ಸುಧೀರ್ಘ BNSS 183 ಹೇಳಿಕೆ ನೀಡಿದ ಬಂಟ್ವಾಳ ತಾಲೂಕಿನ ಬಂಡಾರಿಬೆಟ್ಟು ನಿವಾಸಿ ಪ್ರದೀಪ್ ಕುಲಾಲ್ ಯಾನೆ ಪ್ರದೀಪ್ ಕೋಟ್ಯಾನ್ ತೆರಳಿದ್ದಾರೆ.

ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟ ಬಳಿಕ ಹೇಳಿಕೆಯ ಪ್ರತಿಗೆ ಸಹಿ ಹಾಕಿ ಪ್ರದೀಪ್ ಸಹಿ ಹಾಕಿದ್ದಾರೆ. ಅದನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಭದ್ರವಾಗಿರಸಲಿದೆ. ಹೇಳಿಕೆ ನೀಡಿದ ಬಳಿಕ ಪ್ರದೀಪ್ ಎಸ್.ಐ.ಟಿ ಅಧಿಕಾರಿಗಳ ಜೊತೆ ವಾಪಸ್ ಕಚೇರಿಗೆ ತೆರಳಿದ್ದಾರೆ.
- Advertisement -


