- Advertisement -
![]()
- Advertisement -
ಬೆಳ್ತಂಗಡಿ: ಅಣ್ಣಪ್ಪನ ಶಕ್ತಿ ಏನೆಂದು ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಗೊತ್ತಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ.
ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವೆಲ್ಲರೂ ಸೇರಿ ಪ್ರಾರ್ಥನೆ ಮಾಡಿದ್ದೀರಿ. ಇನ್ನು ನಾನು ಯಾವುದೇ ರೀತಿಯ ಅಪೇಕ್ಷೆ ಇಟ್ಟುಕೊಂಡು ಇಲ್ಲಿನ ಪಟ್ಟಕ್ಕೆ ಬಂದವನಲ್ಲ. ಆಕಸ್ಮಿಕವಾಗಿ ಈ ಪಟ್ಟ ಸಿಕ್ಕಿದ್ದು, ಆರಂಭದಲ್ಲಿ ಈ ಪಟ್ಟಕ್ಕೂ ವಿರೋಧಗಳು ಕೇಳಿ ಬಂದವು. ಇನ್ನು ಯಾವುದೇ ಕ್ಷೇತ್ರ ಬಹಳ ಸಣ್ಣದು ಎಂದು ತಿಳಿದುಕೊಳ್ಳಬೇಡಿ. ತಿರುಪತಿ, ಧರ್ಮಸ್ಥಳ ಮಾತ್ರ ದೊಡ್ಡದು ಅಂದುಕೊಳ್ಳಬೇಡಿ. ಎಲ್ಲ ಕ್ಷೇತ್ರಗಳೂ ದೊಡ್ಡವು” ಎಂದರು.
- Advertisement -


