Sunday, June 7, 2026
Homeಮನರಂಜನೆನಟಿ ಸುಧಾರಾಣಿ ಅವರನ್ನು ಒಂದು ಗಂಟೆಗಳ ಕಾಲ ಗೇಟ್ ಬಳಿ ಕಾಯಿಸಿದ ಅಪೊಲೋ ಆಸ್ಪತ್ರೆ ಸಿಬ್ಬಂದಿ.....

ನಟಿ ಸುಧಾರಾಣಿ ಅವರನ್ನು ಒಂದು ಗಂಟೆಗಳ ಕಾಲ ಗೇಟ್ ಬಳಿ ಕಾಯಿಸಿದ ಅಪೊಲೋ ಆಸ್ಪತ್ರೆ ಸಿಬ್ಬಂದಿ.. ಅಷ್ಟಕ್ಕೂ ಸುಧಾರಾಣಿಯವರಿಗೇನಾಯ್ತು?

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮಿತಿಮೀರಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗದೇ ರೋಗಿಗಳು ಪರದಾಡುತ್ತಿದ್ದಾ. ಕೊರೊನಾದಿಂದಾಗಿ ಬೇರೆ ಕಾಯಿಲೆಯಿಂದ ಬಳಲುತ್ತಿರುವ ಅದೆಷ್ಟೋ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ದಾಖಲಾತಿ ದೊರೆಯುವುದು ಕೂಡ ಕಷ್ಟವಾಗಿದೆಯ ಇದೇ ರೀತಿ ಕಷ್ಟವನ್ನು ಅನುಭವಿಸಿದ್ದಾರೆ ಹಿರಿಯ ನಟಿ ಸುಧಾರಾಣಿ. ನಿನ್ನೆ ತಡರಾತ್ರಿ 10 ಗಂಟೆಯಿಂದ 11 ಗಂಟೆವರೆಗೂ ಅಪೊಲೋ ಆಸ್ಪತ್ರೆಯಲ್ಲಿ ಬೆಡ್‍ಸಿಗದೇ ನಟಿ ಸುಧಾರಾಣಿ ಪರದಾಡಿದ್ದಾರೆ. ಸುಧಾರಾಣಿಯವರನ್ನು 1 ಗಂಟೆ ಗೇಟ್‍ನಿಂದ ಹೊರ ನಿಲ್ಲಿಸಿದ ಘಟನೆ ನಡೆದಿದ್ದು, ಆಸ್ಪತ್ರೆಯ ವಿರುದ್ಧ ನಟಿ ಕಿಡಿಕಾರಿದ್ದಾರೆ.

ನಿನ್ನೆ ತಡರಾತ್ರಿ ಸುಧಾರಾಣಿ ಅಣ್ಣನ ಪುತ್ರಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದಾಗಿ ತಲೆ ಸುತ್ತಿಬಿದ್ದಿದ್ದಾರೆ, ಕೂಡಲೇ ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಗೆ ಆ್ಯಂಬುಲೆನ್ಸ್‍ನಲ್ಲಿ ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯವರು ಬೆಡ್, ವೆಂಟಿಲೇಟರ್ ಇಲ್ಲ ಅಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದರಿಂದ ಬೇಸತ್ತು ಕೊನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್‍ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಸುಧಾರಾಣಿ. ನಂತರವಷ್ಟೇ ಆಸ್ಪತ್ರೆ ಒಳಗೆ ದಾಖಲಾತಿ ನೀಡಲಾಗಿದೆ. ಈ ಬಗ್ಗೆ ಸುಧಾರಾಣಿ ಅಪೊಲೊ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಪೊಲೀಸ್‍ರ ಸ್ಪಂದನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!