- Advertisement -
![]()
- Advertisement -
ಉಡುಪಿ: ಜಿಲ್ಲೆಯ ಗ್ರಾಹಕ ವೇದಿಕೆಯ ಹಿರಿಯ ಟ್ರಸ್ಟಿ ಅಲೆವೂರು ಪದ್ಮನಾಭ ಕೊಡಂಚ (89) ಅವರು ತಮ್ಮ ಪುತ್ರಿಯ ನಿವಾಸದಲ್ಲಿ ಆಗಸ್ಟ್ 31ರ ತಡರಾತ್ರಿ ಕೊಳ್ಳೆಗಾಲದಲ್ಲಿರುವ ನಿಧನರಾಗಿದ್ದಾರೆ.
ಇವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿ ಜೀವನದ ನಿವೃತ್ತಿಯ ನಂತರ, ಅವರು ಉಡುಪಿ ಗ್ರಾಹಕ ವೇದಿಕೆಯ ಟ್ರಸ್ಟಿಯಾಗಿ ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನ ಪರಿಗಣಿಸಿ ಈ ವರ್ಷದ ಫೆಬ್ರವರಿಯಲ್ಲಿ, ಉಡುಪಿ ಯಕ್ಷಗಾನ ಕಲಾರಂಗದಿಂದ ಅವರಿಗೆ “ಸೇವಾಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಉಡುಪಿ ಗ್ರಾಹಕ ವೇದಿಕೆಯು ಕೊಡಂಚ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅಗಲಿದ ಕುಟುಂಬಕ್ಕೆ ಸಂತಾಪ ಸೂಚಿಸಿದೆ.
- Advertisement -


