ಮಂಗಳೂರು; ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಣವ್ ಪಿ. ಶೆಣೈ (24) ಹಾಗೂ ಅನೂಷ್ ಆರ್. (24) ಬಂಧಿತರು.
ಆರೋಪಿಗಳು ದಿನಾಂಕ :31-08-2025 ರಂದು ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ಆಕ್ರಮ ಮದ್ಯ ತಯಾರಿಕೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ, ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪರಿಶೀಲನೆಯಲ್ಲಿ, ಸುಮಾರು ರೂ. 1,15,110/- ಮೌಲ್ಯದ ಆಕ್ರಮ ಮದ್ಯ ಮತ್ತು ತಯಾರಿಕಾ ಯಂತ್ರೋಪಕರಣಗಳು, ಮದ್ಯ ಬಾಟಲಿಗಳು ಮತ್ತು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಪರವಾನಗಿ ಇರುವ Mansion House ಬಾಟ್ಲಿಗಳನ್ನು ವಶಪಡಿಸಿಕೊಂಡು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2025, ಕಲಂ 123 r/w 3(5) BNS 2023 ಹಾಗೂ ಕಲಂ 13, 32, 34 KE Act ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ(L&O)ರಾದ ಶ್ರೀ ಮಿಥುನ್ ಐಪಿಎಸ್, ಹಾಗೂ ಉಪ ಪೊಲೀಸ್ ಆಯುಕ್ತ(ಅಪರಾಧ)ರಾದ ಶ್ರೀ. ರವಿಶಂಕರ್ ಕೆ ಎಸ್ ಪಿ ಎಸ್. ರವರ ಮಾರ್ಗದರ್ಶನದಲ್ಲಿ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೊಣಾಜೆ ಠಾಣಾ ಸಿಬ್ಬಂದಿಯಿಂದ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.


