ಪುತ್ತೂರು; ದಿನಾಂಕ:23.04.2021 ರಂದು ಪುತ್ತೂರು ತಾಲೂಕು ಇರ್ದೆ ಗ್ರಾಮದ ನಿರ್ದೇಶನು ಮೂರ್ತಿ ದೇವಸ್ಥಾನದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪುತ್ತೂರಿನ ಸಾಲ್ಮರದ ತಾರಿಗುಡ್ಡೆ ನಿವಾಸಿ ಸಲಾಂ @ ಡಾಲರ್ ಸಲಾಂ ನನ್ನು ಬಂಧಿಸಿದ್ದರು. ಇದೀಗ ಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಆಗಸ್ಟ್ 28, 2025 ರಂದು ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ Y.H ಆರೋಪಿಗೆ 3 ವರ್ಷ ಸಜೆ ಹಾಗೂ 10,000 ರೂ ದಂಡ ವಿಧಿಸಿ ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಸದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾಗಿ ಚೇತನ ದೇವಿ ರವರು ವಾದ ಮಂಡಿಸಿರುತ್ತಾರೆ. ಪ್ರಕರಣದ ತನಿಖೆಯಲ್ಲಿ ಪ್ರಕರಣದ ತನಿಖೆ ಸಹಾಯಕರಾಗಿ ದೇವರಾಜ್ ಕೆ HC 2025 ರವರು ಹಾಗೂ ನ್ಯಾಯಾಲಯದ ಸಿಬ್ಬಂದಿಯಾಗಿ ಮಾರುತಿ PC 2399 ರವರು ಕರ್ತವ್ಯ ನಿರ್ವಹಿಸಿರುತ್ತಾರೆ.


