- Advertisement -
![]()
- Advertisement -
ಕಾರ್ಕಳ: ನಾಯಿ ಅಡ್ಡ ಬಂದು ಕಾರು ಪಲ್ಟಿಯಾದ ಪರಿಣಾಮ ಖ್ಯಾತ ಡಿಜೆ ಮತ್ತು ನಿರೂಪಕ ಮರ್ವಿನ್ ಮೃತಪಟ್ಟ ಘಟನೆ ಮೂಳೂರಿನ ಹಳ್ಳಿಮನೆ ಹೋಟೆಲಿನ ಮುಂಭಾಗದಲ್ಲಿ ಇಂದು (ಆ.23) ಶನಿವಾರ ಮುಂಜಾನೆ ನಡೆದಿದೆ.
ಅಪಘಾತದಲ್ಲಿ ಬೆಲ್ಮಣ್ ನ ಪ್ರಜ್ವಲ್, ಕಾರ್ಕಳದ ಪ್ರಸಾದ್, ವಿಶ್ಲೇಷ್ ಗಾಯಗೊಂಡಿದ್ದಾರೆ. ಮೃತ ಮರ್ವಿನ್ ಖ್ಯಾತ ಕಾರ್ಯಕ್ರಮ ನಿರೂಪಕನಾಗಿದ್ದು, ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -


