Saturday, June 6, 2026
Homeಕರಾವಳಿಮಂಗಳೂರುನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ     

ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ     

- Advertisement -
- Advertisement -

ನೆಲ್ಯಾಡಿ ಸೂರ್ಯ ನಗರದ ಶ್ರೀರಾಮ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾಲಯದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಶ್ರೀಧರ ಗೋರೆಯವರು ಧ್ವಜಾರೋಹಣಗೈದು   ದೇಶ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನುಡಿದು ಶುಭಹಾರೈಸಿದರು.

ಆಡಳಿತ ಸಮಿತಿಯ ಅಧ್ಯಕ್ಷರಾದ  ಡಾ. ಮುರಳಿಧರರವರು , ದೇಶ ಸೇವೆ ನಮ್ಮೆಲ್ಲರ ಕರ್ತವ್ಯ,  ನಾವು ಎಲ್ಲರೂ ಸತ್ಪ್ರಜೆಗಳಾಗಿ ದೇಶದ ಕಾರ್ಯ ಮಾಡಬೇಕು ಎಂದು  ನುಡಿದರು.ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿ ಸಂಭ್ರಮಿಸಿದರು.  ಕಾರ್ಯಕ್ರಮದ ವೇದಿಕೆಯಲ್ಲಿ  ಆಡಳಿತ  ಮಂಡಳಿ ಕಾರ್ಯದರ್ಶಿ ಶ್ರೀಯುತ ಮೂಲಚಂದ್ರ ಕಾಂಚನ ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕ ಗಣೇಶ್  ವಾಗ್ಲೆ ಹಾಗೂ ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕಿ ಶ್ರೀಮತಿ ಕಾವ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ  ಪ್ರಯುಕ್ತ  ನಡೆಸಿದ್ದ  ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಕ್ತಿ  ಸ್ವಾಗತಿಸಿದರು. ಯಶ್ವಿತ್  ಪಿ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ  ನಿರೂಪಿಸಿದರು.

- Advertisement -

Latest News

error: Content is protected !!