Saturday, June 6, 2026
Homeಕರಾವಳಿಕಂಬಳ ಕ್ಷೇತ್ರದ ರಾಜ, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಕಿಂಗ್ ‘ಚೆನ್ನ’ ಇನ್ನಿಲ್ಲ

ಕಂಬಳ ಕ್ಷೇತ್ರದ ರಾಜ, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಕಿಂಗ್ ‘ಚೆನ್ನ’ ಇನ್ನಿಲ್ಲ

- Advertisement -
- Advertisement -

ಮಂಗಳೂರು: ಕಂಬಳ ಕ್ಷೇತ್ರದ ರಾಜ, ಹಲವು ಚಿನ್ನದ ಪದಕಗಳನ್ನು ಗೆದ್ದಿರುವ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಕಿಂಗ್ ಚೆನ್ನ ಇಂದು ವಿಧಿವಶನಾಗಿದ್ದಾನೆ.

ಯಾವುದೇ ತರಬೇತಿಯಿಲ್ಲದೆ 4ರ ಹರೆಯದಲ್ಲೇ ಕಂಬಳಕ್ಕೆ ಇಳಿದಿದ್ದ ಚೆನ್ನ ಕಂಬಳಾಭಿಮಾನಿಗಳಿಗೆ ಅಚ್ಚುಮೆಚ್ಚಿನವನಾಗಿದ್ದ. ಚೆನ್ನನನ್ನು ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಚೆನ್ನನನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಸುಮಾರು 22 ವರ್ಷಗಳ ಹಿಂದೆ ತಮ್ಮ ಹಟ್ಟಿಗೆ ತಂದಿದ್ದರು. ಮೂಡಬಿದಿರೆಯ ಕೋಟಿ-ಚೆನ್ನಯ ಕಂಬಳದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟಿಯವರಿಗೆ ಚೆನ್ನ ಪದಕ ಗೆದ್ದು ಕೊಟ್ಟಿದ್ದು, ಬಳಿಕ ಸೀನಿಯರ್ ಆದಾಗ ಚೆನ್ನ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ರ ಹಟ್ಟಿಗೆ ತೆರಳಿದ್ದ ಎನ್ನಲಾಗಿದೆ.

ಹಗ್ಗ ಹಿರಿಯ ವಿಭಾಗದಲ್ಲಿ ಗೆಂದಬೆಟ್ಟು ಮೋಡೆ ಮತ್ತು ಚೆನ್ನ ಜೊತೆಯಾಗಿ ಹಲವಾರು ಪ್ರಶಸ್ತಿ ಗೆದ್ದಿದ್ದು, ನಾಲ್ಕು ಬಾರಿ ಸರಣಿ ಶೇಷ್ಠ ಪ್ರಶಸ್ತಿ ಪಡೆದಿರುವ ಚೆನ್ನ ಸತತ 13 ವರ್ಷ ಪದಕ ಗೆದ್ದು ಬೀಗಿದ್ದಾನೆ. ಇದೀಗ ಎಲ್ಲರ ಅಚ್ಚುಮೆಚ್ಚಿನ ಚೆನ್ನ ಇನ್ನಿಲ್ಲ ಎಂಬುವುದು ಕಂಬಳಾಭಿಮಾನಿಗಳಿಗೆ ಅರಗಿಸಲಾಗದ ನೋವಾಗಿದೆ.

- Advertisement -

Latest News

error: Content is protected !!