Thursday, June 4, 2026
Homeಇತರಮೈಸೂರು ಝೂನಲ್ಲಿ ಗಂಡು ಹುಲಿ ಸಾವು

ಮೈಸೂರು ಝೂನಲ್ಲಿ ಗಂಡು ಹುಲಿ ಸಾವು

- Advertisement -
- Advertisement -

ಮೈಸೂರು : ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ “ಬ್ರಹ್ಮ” ಹೆಸರಿನ 20 ವರ್ಷದ ಗಂಡು ಹುಲಿ ಸಾವನ್ನಪ್ಪಿದೆ. ಹುಲಿಯು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣದಿಂದಾಗಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಬ್ರಹ್ಮ ಹುಲಿಯನ್ನು 2008ರ ಮಾರ್ಚ್‌ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಿಂದ ಸೆರೆಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಯೋಗ ಗುರು ಬಿ.ಕೆ.ಎಸ್‌. ಅಯ್ಯಂಗಾರ್‌ ಅವರು ಹುಲಿಯ ಜೀವಮಾನ ಪರ್ಯಂತಕ್ಕೆ ದತ್ತು ಸ್ವೀಕರಿಸಿದ್ದರು. ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರವು ಸಂತಾಪ ಸೂಚಿಸಿದೆ.

- Advertisement -

Latest News

error: Content is protected !!