- Advertisement -
![]()
- Advertisement -
ಜಮ್ಮು: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ 22 ಮಕ್ಕಳ ಮುಂದಿನ ಶಿಕ್ಷಣದ ವೆಚ್ಚವನ್ನು ಭರಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಪರೇಷನ್ ಸಿಂದೂರ ವೇಳೆ ಪಾಕಿಸ್ಥಾನದ ಸೇನೆ ನಡೆಸಿದ್ದ ಶೆಲ್ ದಾಳಿಯಲ್ಲಿ ಪಾಲಕರನ್ನು ಕಳೆದುಕೊಂಡು 22 ಮಕ್ಕಳು ಅನಾಥರಾಗಿದ್ದರು.
ಮೇ 7ರಿಂದ 10ರವರೆಗೆ ಪಾಕ್ ದಾಳಿಯಲ್ಲಿ ಒಬ್ಬ ಅಥವಾ ಇಬ್ಬರೂ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಟ್ಟಿಯನ್ನು ಈಗಾಗಲೇ ರಾಹುಲ್‌ಗೆ ಕಳುಹಿಸ ಲಾಗಿದೆ. ಇನ್ನಷ್ಟು ಮಕ್ಕಳ ಹೆಸರನ್ನೂ ಪಟ್ಟಿಯಲ್ಲಿ ಸೇರ್ಪಡೆಗೊಳಿಸ ಲಾಗುತ್ತದೆ ಎಂದು ಜಮ್ಮು-ಕಾಶ್ಮೀರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ತಾರಿಖ್ ಹಮೀದ್ ಕರ್ರಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
- Advertisement -


